* ಭಾರತದ ಬ್ಯಾಟರ್ ಶುಭಮನ್ ಗಿಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.* ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಸೆಮಿಫೈನಲ್ಗೆ ಮುನ್ನಡೆಸುವಲ್ಲಿ ಶುಭಮನ್ ಪ್ರಮುಖ ಪಾತ್ರ ವಹಿಸಿದರು. ಬಾಂಗ್ಲಾ ವಿರುದ್ಧ ಅಜೇಯ 101 ಹಾಗೂ ಪಾಕಿಸ್ತಾನ ವಿರುದ್ಧ 46 ರನ್ ಗಳಿಸಿದರು.* 21 ರೇಟಿಂಗ್ ಅಂಕ ಪಡೆದು, ಒಟ್ಟು 817 ಅಂಕಗಳಿಗೆ ಏರಿದ್ದಾರೆ. ಬಾಬರ್ ಆಜಂರಿಗಿಂತ 47 ಅಂಕ ಹೆಚ್ಚು ಹೊಂದಿದ್ದಾರೆ.* ವಿರಾಟ್ ಕೊಹ್ಲಿ ಪಾಕ್ ವಿರುದ್ಧದ ಅಜೇಯ ಶತಕದೊಂದಿಗೆ ಐದನೇ ಸ್ಥಾನಕ್ಕೇರಿದ್ದಾರೆ. ಕೆ.ಎಲ್. ರಾಹುಲ್ 15ನೇ ಸ್ಥಾನಕ್ಕೆ, ರಚಿನ್ ರವೀಂದ್ರ 24ಕ್ಕೆ, ವಿಲ್ ಯಂಗ್ 14ಕ್ಕೆ, ಟಾಮ್ ಲೇಥಮ್ 30ಕ್ಕೆ, ಗ್ಲೆನ್ ಫಿಲಿಪ್ಸ್ 12ನೇ ಸ್ಥಾನಕ್ಕೇರಿದ್ದಾರೆ.* ಬೌಲಿಂಗ್ ವಿಭಾಗದಲ್ಲಿ ಕೇಶವ್ ಮಹಾರಾಜ್ ಮತ್ತು ಮ್ಯಾಟ್ ಹೆನ್ರಿ ಅವರು ಅಗ್ರ ಐದರಲ್ಲಿ ಸ್ಥಾನಗಳಿಸಿದ್ದಾರೆ. ಆಸ್ಟ್ರೇಲಿಯಾದ ಆ್ಯಡಂ ಜಂಪಾ ಅವರು 10ನೇ ಸ್ಥಾನಕ್ಕೇರಿದ್ದಾರೆ.