* ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಿಖರ್ ಧವನ್ ಅವರನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.* ಫೆ. 19ರಿಂದ 9ರವರೆಗೆ ಟೂರ್ನಿಯು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ವಿಶ್ವಶ್ರೇಷ್ಠ ಎಂಟು ತಂಡಗಳು ಸ್ಪರ್ಧಿಸಲಿರುವ ಪ್ರತಿಷ್ಠಿತ ಟೂರ್ನಿ ಇದಾಗಿದೆ.* ಧವನ್ ಜೊತೆಗೆ ಪಾಕಿಸ್ತಾನದ ಸರ್ಫ್ರಾಜ್ ಅಹ್ಮದ್, ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಶೇನ್ ವ್ಯಾಟ್ಸನ್ ಮತ್ತು ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಅವರಿಗೂ ಈ ಜವಾಬ್ದಾರಿಯನ್ನು ನೀಡಿದೆ.* ಚಾಂಪಿಯನ್ಸ್ ಟ್ರೋಫಿಯ ಎರಡು ಆವೃತ್ತಿಗಳಲ್ಲಿ 701 ರನ್ ಗಳಿಸಿರುವ ದಾಖಲೆ ಶಿಖರ್ ಧವನ್ ಅವರದ್ದಾಗಿದೆ.* ಸತತವಾಗಿ ಎರಡು ಬಾರಿ ಚಿನ್ನದ ಬ್ಯಾಟ್ ಗೌರವಕ್ಕೂ ಮತ್ತು 2013ರ ಟೂರ್ನಿಯಲ್ಲಿ ಅವರು ಸರ್ವಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದರು.* ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿಯೇ ಅತಿ ಹೆಚ್ಚು ಶತಕಗಳನ್ನು ಹೊಡೆದ ಶ್ರೇಯ ಅವರದ್ದಾಗಿದೆ.* ಚಾಂಪಿಯನ್ಸ್ ಟ್ರೋಫಿ ಏಳು ವರ್ಷಗಳ ಬಳಿಕ ಪ್ರಾರಂಭವಾಗುತ್ತಿದ್ದು, ಪಾಕಿಸ್ತಾನದಲ್ಲಿ ಆಯೋಜಿತವಾಗಿದೆ. ಭಾರತವು ತಂಡವು ಪಾಕಿಸ್ತಾನಕ್ಕೆ ಹೋಗದ ಕಾರಣ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಎಂಟು ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿದ್ದು, ಪಾಕ್ನ ಮೂರು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.