* ಪ್ರೀತಿ ಸರನ್ ಅವರನ್ನು ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ (ICESCR)ಯ ಅಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ. ಅವರು 36 ವರ್ಷಗಳ ಕಾಲ ರಾಜತಾಂತ್ರಿಕ ಅಧಿಕಾರಿಯಾಗಿ ವಿವಿಧ ರಾಷ್ಟ್ರಗಳಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ.* ಬ್ರಿಕ್ಸ್, ಬಿಮ್ಸ್ಟೆಕ್, ಅಸಿಯಾನ್-ಇಂಡಿಯಾ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾರತದ ಶೆರ್ಪಾ ಆಗಿ ಪ್ರಮುಖ ಪಾತ್ರ ವಹಿಸಿದ್ದರು.* ಅವರು ಲೇಡಿ ಶ್ರೀರಾಮ್ ಕಾಲೇಜಿನಿಂದ ಬಿ.ಎ ಪದವಿ ಪಡೆದು 1982ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆಯಾದರು. ಮಾಸ್ಕೋ, ಢಾಕಾ, ಕೈರೋ, ಜಿನಿವಾ, ಟೋರಾಂಟೋ ಮತ್ತು ವಿಯೆಟ್ನಾಮ್ ಸೇರಿ ಅನೇಕ ದೇಶಗಳಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ.* 1966ರಲ್ಲಿ ಸ್ಥಾಪಿತವಾದ ಐಸಿಇಎಸ್ಸಿಆರ್, 1976ರಿಂದ ಜಾರಿಗೆ ಬಂದು 173 ರಾಷ್ಟ್ರಗಳಲ್ಲಿ ಮಾನವ ಹಕ್ಕುಗಳ ಅನುಷ್ಠಾನಕ್ಕೆ ಸಹಕಾರ ನೀಡುತ್ತಿದೆ.* ಭಾರತವು 1979ರಲ್ಲಿ ಸದಸ್ಯತ್ವ ಪಡೆದು ಅದರ ಭಾಗವಾಗಿದೆ. ಆರೋಗ್ಯ, ಶಿಕ್ಷಣ, ಸಾಮಾಜಿಕ ಭದ್ರತೆ, ಸಾಂಸ್ಕೃತಿಕ ಒಳಗೊಳ್ಳುವಿಕೆ ಮತ್ತು ಜೀವನಮಟ್ಟ ಸುಧಾರಣೆ ಕುರಿತು ಈ ಸಮಿತಿ ಮೇಲ್ವಿಚಾರಣೆ ನಡೆಸುತ್ತದೆ.