* ಭಾರತ ಸರ್ಕಾರ ಮತ್ತೆ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಮುಂದಾಗಿದೆ. 2026ರ ಅಂತ್ಯಕ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಗುರಿ ಹೊಂದಿದ್ದು, ಈಗಾಗಲೇ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಅದಾನಿ ಗ್ರೂಪ್ಗೆ ನೀಡಲಾಗಿದೆ.* 2025-26ನೇ ಬಜೆಟ್ ಪೂರ್ವ ಸಭೆಯಲ್ಲಿ ವಿಮಾನ ನಿಲ್ದಾಣದ ಖಾಸಗೀಕರಣದ ಕುರಿತು ಚರ್ಚೆ ನಡೆದು, ಸಚಿವ ಸಂಪುಟ ಸಭೆಯಲ್ಲಿ ಮಂಡನೆಗಾಗಿ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಲಾಗಿದೆ.* 13 ವಿಮಾನ ನಿಲ್ದಾಣಗಳ ಖಾಸಗೀಕರಣವನ್ನು ಪಿಪಿಪಿ ಮಾದರಿಯಲ್ಲಿ ಅಂತಿಮಗೊಳಿಸಲು ಸಚಿವ ಸಂಪುಟ ತೀರ್ಮಾನ ಮಾಡಬೇಕಿದೆ. ಹಣಕಾಸು ಸಚಿವಾಲಯಕ್ಕೆ ವರದಿ ಸಲ್ಲಿಕೆಯಾಗಿದ್ದು, ಎನ್ಎಂಪಿ ಅಡಿ 2022-25ರವರೆಗೆ 25 ವಿಮಾನ ನಿಲ್ದಾಣ ಖಾಸಗೀಕರಣ ಉದ್ದೇಶಿತವಾಗಿತ್ತು. ಈಗ 13 ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿ ವಲಯಕ್ಕೆ ವಹಿಸಲು ನಿರ್ಧಾರಗೊಂಡಿದೆ.* 2024ರ ಆಗಸ್ಟ್ನಲ್ಲಿ ರಾಜ್ಯಸಭೆಯಲ್ಲಿ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹಲ್ ಖಾಸಗೀಕರಣದ ಅಗತ್ಯತೆಯನ್ನು ವಿವರಿಸಿದರು. ಭುವನೇಶ್ವರ, ವಾರಣಾಸಿ, ಅಮೃತಸರ, ತಿರುಪತಿ, ಚೆನ್ನೈ, ವಿಜಯವಾಡ ಸೇರಿ 13 ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗೆ ಎಎಐ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಟೆಂಡರ್ ಆಹ್ವಾನಿಸಲು ಯೋಜಿಸಿದೆ.* 2024ರಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಕಾರಣ ಕೇಂದ್ರ ಸರ್ಕಾರ ವಿಮಾನ ನಿಲ್ದಾಣಗಳ ಖಾಸಗೀಕರಣವನ್ನು ವಿಳಂಬ ಮಾಡಿತ್ತು. 2025ರಲ್ಲಿ ಈ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ, ಅದಾನಿ ಗ್ರೂಪ್ ತ್ರಿವೆಂಡ್ರಮ್, ಮಂಗಳೂರು, ಅಹಮದಾಬಾದ್, ಜೈಪುರ, ಲಕ್ನೋ ಮತ್ತು ಗೌಹಾತಿ ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿದೆ.