* ವಿದೇಶದಲ್ಲಿ 'ಐರನ್ ಮ್ಯಾನ್' ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರೈಸಿ ರಾಜ್ಯ ಸಶಸ್ತ್ರ ಮೀಸಲು ಪಡೆಯ (ಕೆಎಸ್ಆರ್ಪಿ) ಐಜಿಪಿ ಸಂದೀಪ್ ಪಾಟೀಲ್ ಅವರು ಪೊಲೀಸ್ ಇಲಾಖೆಯಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.* ಡೆನ್ಮಾರ್ಟ್ ದೇಶದ ಕೋಪನ್ಹೇಗನ್ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಐರನ್ ಮ್ಯಾನ್ ಸ್ಪರ್ಧೆ ನಡೆದಿದ್ದು, ಆ ಐರನ್ಮ್ಯಾನ್ ಟ್ರೈಫ್ಲಾನ್ನ್ನು ಯಶಸ್ವಿಯಾಗಿ ಸಂದೀಪ್ ಪಾಟೀಲ್ ಪೂರೈಸಿದ್ದಾರೆ. * ಈ ಸ್ಪರ್ಧೆಯಲ್ಲಿ ಕಠಿಣ ಸವಾಲಿನಲ್ಲಿ 3.8 ಕಿ.ಮೀ ಸಮುದ್ರದಲ್ಲಿನ ಈಜುವಿಕೆ, 180 ಕಿ.ಮೀ. ಸೈಕ್ಲಿಂಗ್ ಹಾಗೂ 42 ಕಿ.ಮೀ ಮ್ಯಾರಥಾನ್ ಒಳಗೊಂಡಿತ್ತು. ಈ 3 ಸವಾಲುಗಳನ್ನು 14 ಗಂಟೆ 45 ನಿಮಿಷಗಳಲ್ಲಿ ಸಂದೀಪ್ ಪಾಟೀಲ್ ಅವರು ಪೂರೈಸಿ ದಾಖಲೆ ನಿರ್ಮಿಸಿದ್ದಾರೆ. ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಪದಕ ಗೆದ್ದ ಸಂದೀಪ್ ಪಾಟೀಲ್ ಅವರಿಗೆ ರಾಜ್ಯ ಪೊಲೀಸ್ ಇಲಾಖೆ ಹಾಗೂ ಬೆಂಗಳೂರ ನಗರ ಪೊಲೀಸರು ಅಭಿನಂದಿಸಿದ್ದಾರೆ. * ಬಗ್ಗೆ ಜಾಲತಾಣಗಳ ಅಧಿಕೃತ ಪೆಜ್ನಲ್ಲಿ ವಿಡಿಯೋ, ಭಾವಚಿತ್ರ ಹಂಚಿಕೊಂಡಿರುವ ಲಾಖೆ, 'ಟ್ರೈಥಾನ್ನ ಮೂರು ಕಠಿಣ ಸವಾಲುಗಳನ್ನು ಸಂದೀಪ್ ಹಾ ಟೀಲ್ ಯಶಸ್ವಿಯಾಗಿ ಪೂರೈಸಿ ಅಸಾಧಾರಣ ಛಾತಿ, ಶಿಸ್ತು ಮತ್ತು ಏಕಲ್ಪ ತೋರಿಸಿದ್ದಾರೆ. ಈ ಸ್ಫೂರ್ತಿದಾಯಕ ಸಾಧನೆ ನಮ್ಮೆಲ್ಲರಿಗೂ ಮೈ ತಂದಿದೆ' ಅಭಿನಂದನೆಗಳು ಎಂದು ಬರೆದಿದ್ದಾರೆ.