* ರಾಜ್ಕೋಟ್ನಲ್ಲಿ ಬುಧವಾರ(ಜನವರಿ 15) ನಡೆದ ಮೂರನೇ ಮತ್ತು ಅಂತಿಮ ಮಹಿಳಾ ಏಕದಿನ ಪಂದ್ಯದಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧ 304 ರನ್ಗಳ ಬೃಹತ್ ಜಯ ಸಾಧಿಸಿತು. ಇದರೊಂದಿಗೆ ಭಾರತ ತಂಡವು 3-0 ಯಿಂದ ಐರ್ಲೆಂಡ್ ಎದುರು * ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಭಾರತ ತಂಡದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್ ತಲಾ ಶತಕ ಗಳಿಸುವ ಮೂಲಕ ಭಾರತ ತಂಡ ತನ್ನ ಅತ್ಯಧಿಕ 435 ರನ್ಗಳ ಮೊತ್ತವನ್ನು ಗಳಿಸಿತು.* ಮಂಧಾನ (135) ಮತ್ತು ರಾವಲ್ (154) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ 233 ರನ್ಗಳ ಭರ್ಜರಿ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು.* ಭಾರತ ತಂಡವು 50 ಓವರ್ಗಳಲ್ಲಿ 5 ವಿಕೆಟ್ಗಳಿಗೆ 435 ರನ್ ಗಳಿಸಿತು. ಐರ್ಲೆಂಡ್ ತಂಡವು 31.4 ಓವರ್ಗಳಲ್ಲಿ 131 ರನ್ ಗಳಿಸಿ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಆತಿಥೇಯ ಭಾರತ ತಂಡವು 304 ರನ್ ಬೃಹತ್ ಅಂತರದಿಂದ ಜಯಸಾಧಿಸಿತು.* ಭಾರತದ ಪುರುಷರ ಕ್ರಿಕೆಟ್ ತಂಡವು 2011ರಲ್ಲಿ ಇಂದೋರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 5 ವಿಕೆಟ್ಗಳಿಗೆ 418 ರನ್ ಗಳಿಸಿರುವುದು ಗರಿಷ್ಠ ಸಾಧನೆ. ಈ ಮೊತ್ತವನ್ನು ಮೀರಿರುವ ಸ್ಮೃತಿ ಬಳಗವು ದಾಖಲೆ ಬರೆದಿದೆ.* ಪ್ರತೀಕಾಗೆ ಇದು ಮೊದಲ ಶತಕ, ಸ್ಮೃತಿ ವೇಗ ಮತ್ತು ಆಕ್ರಮಣಶೀಲ ಆಟವಾಡಿರು. 200 ರನ್ಗಳಿಗಿಂತ ಹೆಚ್ಚಿನ ಜೊತೆಯಾಟವಾಡಿದ ಭಾರತದ ನಾಲ್ಕನೇ ಜೋಡಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.* ಭಾರತ ತಂಡದ ದೀಪ್ತಿ ಶರ್ಮಾ(27ಕ್ಕೆ 3) ಮತ್ತು ತನುಜಾ ಕನ್ವರ್ (31ಕ್ಕೆ 2) ಅವರ ಶ್ರೇಷ್ಠ ಬೌಲಿಂಗ್ ಮುಂದೆ ಐರ್ಲೆಂಡ್ ತಂಡವು ತತ್ತರಿಸಿತು.