Job Description: ➤ ಭಾರತೀಯ ರಕ್ಷಣಾ ವಲಯದಲ್ಲಿ ಪ್ರಮುಖ ಬದಲಾವಣೆಯಾಗಿದ್ದು, ಭಾರತೀಯ ವಾಯುಸೇನೆಯ (Indian Air Force - IAF) ನೂತನ ಉಪ ಮುಖ್ಯಸ್ಥರಾಗಿ (Vice Chief of the Air Staff - VCAS) ಅನುಭವಿ ಫೈಟರ್ ಪೈಲಟ್ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ (Air Marshal Ashutosh Dixit) ಅವರನ್ನು ಕೇಂದ್ರ ರಕ್ಷಣಾ ಸಚಿವಾಲಯ ನೇಮಕ ಮಾಡಿದೆ. ಅಶುತೋಷ್ ದೀಕ್ಷಿತ್ ಅವರು 2026ರ ಜುಲೈ 1 ರಿಂದ ಅಧಿಕೃತವಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಈ ಹುದ್ದೆಯಲ್ಲಿರುವ ಏರ್ ಮಾರ್ಷಲ್ ನಾಗೇಶ್ ಕಪೂರ್ ಅವರ ಅವಧಿ ಮುಕ್ತಾಯದ ನಂತರ ದೀಕ್ಷಿತ್ ಅವರು ವಾಯುಸೇನೆಯ ಎರಡನೇ ಅತ್ಯುನ್ನತ ಕಮಾಂಡ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.➤ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್: ಸುಮಾರು ನಾಲ್ಕು ದಶಕಗಳ ಕಾಲ ಭಾರತೀಯ ವಾಯುಸೇನೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಅಶುತೋಷ್ ದೀಕ್ಷಿತ್ ಅವರು ರಕ್ಷಣಾ ಕಾರ್ಯತಂತ್ರ ಮತ್ತು ಆಧುನೀಕರಣದಲ್ಲಿ ಅಪಾರ ಅನುಭವ ಹೊಂದಿದ್ದಾರೆ. - ಇವರು ಡಿಸೆಂಬರ್ 6, 1986 ರಂದು ಭಾರತೀಯ ವಾಯುಸೇನೆಯ ಫೈಟರ್ ಸ್ಟ್ರೀಮ್ (Fighter Stream) ಗೆ ಕಮಿಷನ್ ಪಡೆದರು. - ಇವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA - Khadakwasla), ಬಾಂಗ್ಲಾದೇಶದ ಡಿಫೆನ್ಸ್ ಸರ್ವಿಸಸ್ ಕಮಾಂಡ್ ಅಂಡ್ ಸ್ಟಾಫ್ ಕಾಲೇಜ್ ಮತ್ತು ನವದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. - ದೀಕ್ಷಿತ್ ಅವರು ಅತ್ಯುತ್ತಮ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಮತ್ತು ಎಕ್ಸ್‌ಪೆರಿಮೆಂಟಲ್ ಟೆಸ್ಟ್ ಪೈಲಟ್ ಆಗಿದ್ದಾರೆ. ಇವರು ಮಿರಾಜ್-2000 (Mirage-2000), ಮಿಗ್ರ್-21 (MiG-21), ಮತ್ತು ಜಾಗ್ವಾರ್ (Jaguar) ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಮಾದರಿಯ ಯುದ್ಧವಿಮಾನಗಳನ್ನು ಹಾರಿಸಿದ 3,300 ಕ್ಕೂ ಹೆಚ್ಚು ಗಂಟೆಗಳ ಸುದೀರ್ಘ ಫ್ಲೈಯಿಂಗ್ ಅನುಭವ ಹೊಂದಿದ್ದಾರೆ. ➤ ಬೆಂಗಳೂರು ಮತ್ತು ಕರ್ನಾಟಕದೊಂದಿಗಿನ ಒಡನಾಟ: ಕರ್ನಾಟಕದ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಈ ಅಂಶ ಮುಖ್ಯವಾಗಿದೆ. ಏರ್ ಮಾರ್ಷಲ್ ದೀಕ್ಷಿತ್ ಅವರು ಬೆಂಗಳೂರಿನ ವಿಮಾನ ಮತ್ತು ವ್ಯವಸ್ಥೆಗಳ ಪರೀಕ್ಷಾ ಸಂಸ್ಥೆ (Aircraft and Systems Testing Establishment - ASTE) ಯಲ್ಲಿ ಟೆಸ್ಟ್ ಪೈಲಟ್ ಆಗಿ ಮತ್ತು ನಂತರ ಫ್ಲೈಟ್ ಟೆಸ್ಟ್ ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಜಾಗ್ವಾರ್ ಮತ್ತು ಮಿಗ್ರ್-27 ವಿಮಾನಗಳ ದೇಶೀಯ ಏವಿಯಾನಿಕ್ಸ್ ಅಪ್‌ಗ್ರೇಡ್ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೆ, ಕರ್ನಾಟಕದ ಬೀದರ್ ವಾಯುಸೇನಾ ನೆಲೆ (Air Force Station Bidar) ಯ ಏರ್ ಆಫೀಸರ್ ಕಮಾಂಡಿಂಗ್ (AOC) ಆಗಿಯೂ ಕಾರ್ಯನಿರ್ವಹಿಸಿದ್ದಾರೆ.➤ ಪ್ರಮುಖ ಸೇವೆಗಳು ಮತ್ತು ಸಾಧನೆಗಳು: ಆಪರೇಷನ್ ಸಫೇದ್ ಸಾಗರ್ ಮತ್ತು ರಕ್ಷಕ್: ಕಾರ್ಗಿಲ್ ಯುದ್ಧದ ಸಮಯದಲ್ಲಿ ನಡೆದ 'ಆಪರೇಷನ್ ಸಫೇದ್ ಸಾಗರ್' ಮತ್ತು 'ಆಪರೇಷನ್ ರಕ್ಷಕ್' ಕಾರ್ಯಾಚರಣೆಗಳಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿದ್ದರು. ಆತ್ಮನಿರ್ಭರತೆ ಮತ್ತು ಆಧುನೀಕರಣ: ವಾಯುಸೇನೆಯ ಉಪ ಮುಖ್ಯಸ್ಥರಾಗುವ ಮುನ್ನ ಇವರು ಹೆಡ್‌ಕ್ವಾರ್ಟರ್ಸ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್‌ನ ಮುಖ್ಯಸ್ಥರಾಗಿ (CISC) ಮತ್ತು ವಾಯುಸೇನೆಯ ಡೆಪ್ಯುಟಿ ಚೀಫ್ ಆಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಭಾರತದ ಸ್ವದೇಶಿ ಲಘು ಯುದ್ಧ ವಿಮಾನಗಳಾದ LCA ತೇಜಸ್ ಮಾರ್ಕ್-1A, ಮಾರ್ಕ್-2 ಮತ್ತು AMCA (Advanced Medium Combat Aircraft) ಯೋಜನೆಗಳಿಗೆ ಹೆಚ್ಚಿನ ವೇಗ ನೀಡಿದ್ದರು. ರಕ್ಷಣಾ ಸುಧಾರಣೆಗಳು (Theaterisation): ಭಾರತೀಯ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯನ್ನು ಒಟ್ಟುಗೂಡಿಸುವ 'ಥಿಯೇಟರ್ ಕಮಾಂಡ್' (Integrated Theatre Commands) ಪ್ರಕ್ರಿಯೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ➤ ಗೌರವಗಳು ಮತ್ತು ಪ್ರಶಸ್ತಿಗಳು: ಪರಮ ವಿಶಿಷ್ಟ ಸೇವಾ ಪದಕ (PVSM) ಅತಿ ವಿಶಿಷ್ಟ ಸೇವಾ ಪದಕ (AVSM) ವಾಯುಸೇನಾ ಪದಕ (VM) ವಿಶಿಷ್ಟ ಸೇವಾ ಪದಕ (VSM) Civil PC ಪರೀಕ್ಷೆಗಾಗಿ ಟಾಪ್ ಪುಸ್ತಕಗಳು – ನಿಮ್ಮ KPSCVaani ನಲ್ಲಿ ಭರ್ಜರಿ ಆಫರ್!