* ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರ್ಗದರ್ಶಕರಾಗಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ನೇಮಕಗೊಂಡಿದ್ದಾರೆ.* ಪೀಟರ್ಸನ್, ಹೆಡ್ಕೋಚ್ ಹೇಮಾಂಗ್ ಬದಾನಿ, ಕ್ರಿಕೆಟ್ ನಿರ್ದೇಶಕ ವೇಣುಗೋಪಾಲ್ ರಾವ್, ಬೌಲಿಂಗ್ ಕೋಚ್ ಮುನಾಫ್ ಪಟೇಲ್ ಹಾಗೂ ಸಹಾಯಕ ಕೋಚ್ ಮ್ಯಾಥ್ಯೂ ಮೋಟ್ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.* 44 ವರ್ಷ ವಯಸ್ಸಿನ ಪೀಟರ್ಸನ್, ಈ ಹಿಂದೆ 2014ರಲ್ಲಿ ಆಗಿನ ಡೆಲ್ಲಿ ಡೇರ್ಡೆವಿಲ್ಸ್ ತಂಡಕ್ಕೆ ನಾಯಕರಾಗಿದ್ದರು. 2016ರಲ್ಲಿ ಅವರು ಕೊನೆಯ ಬಾರಿ ಐಪಿಎಲ್ನಲ್ಲಿ ಆಡಿದ್ದರು.* ‘ತವರು ಡೆಲ್ಲಿ ತಂಡಕ್ಕೆ ಮರಳಲು ಖುಷಿಯಾಗುತ್ತಿದೆ! ಡೆಲ್ಲಿ ತಂಡದ ಜೊತೆ ನನಗೆ ಸವಿನೆನಪುಗಳಿವೆ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.* ಡೆಲ್ಲಿ ಇದುವರೆಗೆ ಐಪಿಎಲ್ ನಲ್ಲಿ ಪ್ರಶಸ್ತಿ ಗೆದ್ದಿಲ್ಲ. ಒಮ್ಮೆ ಫೈನಲ್ ತಲಪಿತ್ತು. ಈ ಹಿಂದಿನ ಆವೃತ್ತಿಯಲ್ಲಿ ಆರನೇ ಸ್ಥಾನ ಗಳಿಸಿತ್ತು.* ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾರ್ಚ್ 22ರಂದು ಆರಂಭವಾಗುವ ಈ ಬಾರಿಯ ಆವೃತ್ತಿಗೆ ಇದುವರೆಗೆ ನಾಯಕನ ಹೆಸರು ಘೋಷಿಸಿಲ್ಲ.