* ಜಿಂಬಾಬ್ವೆಯ ಕ್ರಿಸ್ಟಿ ಕೊವೆಂಟ್ರಿ ಅವರನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಮತ್ತು ಮೊದಲ ಆಫ್ರಿಕನ್ ಎಂಬ ಗೌರವ ದೊರೆತಿದೆ.* 41 ವರ್ಷದ ಕೊವೆಂಟ್ರಿ, ಕ್ರೀಡಾ ಸಚಿವೆ ಮತ್ತು ಎರಡು ಬಾರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತೆ. 131 ವರ್ಷಗಳ ಇತಿಹಾಸ ಹೊಂದಿರುವ ಒಲಿಂಪಿಕ್ ಸಮಿತಿಯ ಹತ್ತನೇ ಮುಖ್ಯಸ್ಥರಾಗಲಿದ್ದಾರೆ. ಪ್ರಸ್ತುತ ಥಾಮಸ್ ಬಾಕ್ ಅಧ್ಯಕ್ಷರಾಗಿದ್ದಾರೆ.* ಏಳು ಅಭ್ಯರ್ಥಿಗಳಿದ್ದ ಈ ಚುನಾವಣೆಯಲ್ಲಿ ಕ್ರಿಸ್ಟಿ ಮೊದಲ ಸುತ್ತಿನಲ್ಲೇ 49 ಮತಗಳನ್ನು ಪಡೆದು ಅಮೋಘ ಜಯ ಗಳಿಸಿದರು.* ಜುವಾನ್ ಅಂಟೊನಿಯೊ ಸಮರಾಂಚ್ ಜೂನಿಯರ್ (28) ಅತಿ ಹೆಚ್ಚು ಮತ ಪಡೆದರೆ, ಸೆಬಾಸ್ಟಿಯನ್ ಕೊ (8), ಡೇವಿಡ್ ಲ್ಯಾಪರ್ಟಿಂಟ್ (4), ಮೊರಿನಾರಿ ವತಾನಬೆ (4), ಜೋರ್ಡಾನ್ನ ಪ್ರಿನ್ಸ್ ಫೈಸಲ್ (2) ಮತ್ತು ಜೋಹಾನ್ ಎಲಿಷಾ (2) ಕಡಿಮೆ ಮತ ಪಡೆದರು.* ಈಜು ತಾರೆಯಾಗಿದ್ದ ಕ್ರಿಸ್ಟಿ 2004ರ ಒಲಿಂಪಿಕ್ಸ್ ನಲ್ಲಿ ಒಂದು ಚಿನ್ನ (200 ಮೀ. ಬ್ಯಾಕ್ಸ್ಟ್ರೋಕ್) ಸೇರಿದಂತೆ ಮೂರು ಪದಕ ಗಳನ್ನು ಗೆದ್ದರು. 2008ರಲ್ಲಿ ಚಿನ್ನ ಉಳಿಸಿಕೊಂಡು, 4 ಬೆಳ್ಳಿ ಮತ್ತು 1 ಕಂಚು ಪದಕ ಜಯಿಸಿದರು. * ಹಲವು ಅಂತರರಾಷ್ಟ್ರೀಯ ಕೂಟಗಳಲ್ಲಿ ಅವರು ದೇಶವನ್ನು ಪ್ರತಿನಿಧಿಸಿದ್ದಾರೆ. 2016ರಲ್ಲಿ ನಿವೃತ್ತರಾದ ಬಳಿಕ, ಜಿಂಬಾಬ್ವೆ ಕ್ರೀಡಾ ಮತ್ತು ಮನರಂಜನಾ ಸಚಿವೆಯಾಗಿ ಸೇವೆ ಸಲ್ಲಿಸಿದರು.* ಥಾಮಸ್ ಬಾಕ್ ಅವರ ಅಧಿಕಾರಾವಧಿ ಒಲಿಂಪಿಕ್ ದಿನ (ಜೂನ್ 23) ಮುಗಿಯಲಿದೆ. ಅವರು ಗರಿಷ್ಠ 12 ವರ್ಷ ಹುದ್ದೆಯಲ್ಲಿದ್ದಂತೆ ಆಗಲಿದೆ. ಬುಧವಾರ ನಡೆದ ಸಮಾರಂಭದಲ್ಲಿ ಭಾವನಾತ್ಮಕ ರಾಗಿದ್ದ ಬಾಕ್ ಅವರನ್ನು ಉಳಿದ ಸದಸ್ಯರು ಅವರ ಸೇವೆಗಾಗಿ ಶ್ಲಾಘಿಸಿದ್ದರು. ಅವರಿಗೆ ‘ಗೌರವ ಅಜೀವ ಅಧ್ಯಕ್ಷ’ ಎಂಬ ಪದವಿ ನೀಡಲಾಗಿತ್ತು.* ಥಾಮಸ್ ಬಾಕ್ ಅವರ ಅಧಿಕಾರಾವಧಿ ಜೂನ್ 23ರಂದು ಕೊನೆಗೊಳ್ಳಲಿದೆ, ಇದರಿಂದ 12 ವರ್ಷ ಸೇವೆ ಪೂರ್ಣಗೊಳ್ಳುತ್ತದೆ. ಬುಧವಾರ(ಮಾರ್ಚ್ 19) ನಡೆದ ಸಮಾರಂಭದಲ್ಲಿ, ಭಾವನಾತ್ಮಕರಾಗಿದ್ದ ಬಾಕ್ ಅವರನ್ನು ಸದಸ್ಯರು ಶ್ಲಾಘಿಸಿದರು ಮತ್ತು ಅವರಿಗೆ ‘ಗೌರವ ಅಜೀವ ಅಧ್ಯಕ್ಷ’ ಪದವಿ ನೀಡಲಾಯಿತು.