* ಇಂಡಿಯನ್ ಆಯಿಲ್ ಕಂಪನಿಯ ‘ಎಕ್ಸ್ಟ್ರಾಪವರ್ ಫ್ಲೀಟ್ ಕಾರ್ಡ್ ಲಾಯಲ್ಟಿ ಪ್ರೋಗ್ರಾಂ’ 2025ರ ‘ಸ್ಕೋಚ್ ಚಿನ್ನದ ಪ್ರಶಸ್ತಿ’ ಗೆ ಪಾತ್ರವಾಗಿದೆ.* ಈ ಯೋಜನೆಗೆ ಡಿಜಿಟಲ್ ಪರಿವರ್ತನೆ ವಿಭಾಗದಲ್ಲಿ – ವ್ಯಾಪಾರ ಪ್ರಕ್ರಿಯೆಗಳ ಸುಧಾರಣೆಗೆ ನೀಡುವ ಪ್ರಶಸ್ತಿ ಎಂದು ಕಂಪನಿ ಸ್ಪಷ್ಟಪಡಿಸಿದೆ.* ಸ್ಕೋಚ್ನ 100ನೇ ಶೃಂಗಸಭೆಯಲ್ಲಿ, ಸ್ಕೋಚ್ ಡೆವಲಪ್ಮೆಂಟ್ ಫೌಂಡೇಷನ್ನ ಅಧ್ಯಕ್ಷ ಸಮೀರ್ ಕೊಚಾರ್ ಅವರು ಇಂಡಿಯನ್ ಆಯಿಲ್ ತಂಡಕ್ಕೆ ಪ್ರಶಸ್ತಿಯನ್ನು ನೀಡಿದರು.* “ಈ ಗೌರವವು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಹೊಸತನ ಬೆಳೆಸುವಲ್ಲಿ ಹಾಗೂ ಗ್ರಾಹಕರಿಗೆ ತಲುಪುವ ಡಿಜಿಟಲ್ ಸೇವೆಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸುವ ಇಂಡಿಯನ್ ಆಯಿಲ್ನ ಪ್ರಯತ್ನಗಳನ್ನು ಮಾನ್ಯಗೊಳಿಸುತ್ತದೆ” ಎಂದು ಕಂಪನಿ ಹೇಳಿದೆ.* ಆಡಳಿತ, ಹಣಕಾಸು, ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಸಾಮಾಜಿಕ-ಆರ್ಥಿಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದ ಸಂಸ್ಥೆಗಳಿಗೆ ಸ್ಕೋಚ್ ಸಂಸ್ಥೆಯು ಗೌರವ ನೀಡುತ್ತದೆ. ಇದು ಸರ್ಕಾರೇತರ ಮತ್ತು ಸ್ವತಂತ್ರ ಸಂಸ್ಥೆಯಾಗಿದೆ.