* ಭಾರತದ ಶೂಟರ್ಗಳಾದ ಆರ್ಯ ಬೊರ್ಸ್ ಮತ್ತು ಅರ್ಜುನ್ ಬಬೂತಾ ಜೋಡಿಯು ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ನ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.* ಫೈನಲ್ನಲ್ಲಿ ಈ ಜೋಡಿ ಚೀನಾದ ಒಲಿಂಪಿಕ್ ಚಾಂಪಿಯನ್ಗಳನ್ನು 17–7 ಅಂತರದಿಂದ ಸೋಲಿಸಿತು.* ಅರ್ಹತಾ ಸುತ್ತಿನಲ್ಲಿ ಭಾರತ 635.2 ಅಂಕ ಗಳಿಸಿ ಫೈನಲ್ಗೆ ಪ್ರವೇಶಿಸಿತು, ಆದರೆ ಚೀನಾ (635.9) ಜೋಡಿ 0.7 ಅಂಕಗಳ ಅಂತರದಲ್ಲಿ ಮೊದಲ ಸ್ಥಾನದಲ್ಲಿತ್ತು. ಆ ಅಂಕಗಳು ವಿಶ್ವಕಪ್ ಕ್ವಾಲಿಫಿಕೇಶನ್ ದಾಖಲೆಯಾಗಿ ದಾಖಲಾಗಿದೆ.* ಇದಕ್ಕೂ ಮೊದಲು ಪೆರುವಿನ ವಿಶ್ವಕಪ್ನಲ್ಲಿ ಆರ್ಯ ಅವರು ರುದ್ರಾಂಕ್ಷ್ ಪಾಟೀಲ ಜತೆಗೆ ಬೆಳ್ಳಿ ಪದಕ ಗೆದ್ದಿದ್ದರು. ಇದೇ ಸ್ಪರ್ಧೆಯಲ್ಲಿ ಇಳವೆನಿಲ್ ವಾಳರಿವನ್ ಮತ್ತು ಅಂಕುಶ್ ಜಾಧವ್ ಜೋಡಿ 631.8 ಅಂಕ ಗಳಿಸಿ ಆರನೇ ಸ್ಥಾನ ಪಡೆದಿತು.* ನಾರ್ವೆ ದೇಶದ ಜೀನೆಟ್ ಹೆಗ್ ಡ್ಯೂಸ್ಟಾಡ್ ಮತ್ತು ಜಾನ್ ಹೆಗ್ ಜೋಡಿ ಅಮೆರಿಕ ವಿರುದ್ಧ 16–14 ಅಂತರದಲ್ಲಿ ಗೆದ್ದು ಕಂಚಿನ ಪದಕವನ್ನು ಪಡೆದಿದೆ.* ಈ ಚಿನ್ನದೊಂದಿಗೆ ಭಾರತವು ಈ ವಿಶ್ವಕಪ್ನಲ್ಲಿ ಎರಡನೇ ಚಿನ್ನ ಮತ್ತು ಒಟ್ಟು ನಾಲ್ಕು ಪದಕಗಳನ್ನು ಗಳಿಸಿದೆ. ಸಿಫ್ತ್ ಕೌರ್ ಮತ್ತು ಇಳವೆನಿಲ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.