* ಐಎನ್ಎಸ್ ವಿಕ್ರಾಂತ್ ನೌಕಾಪಡೆಯ ಯುದ್ಧ ವಿಮಾನಗಳಿಗಾಗಿ 26 ರಫೆಲ್–ಎಂ ಜೆಟ್ ಖರೀದಿಗೆ ₹64 ಸಾವಿರ ಕೋಟಿ ಒಪ್ಪಂದಕ್ಕೆ ಭದ್ರತಾ ಸಂಪುಟ ಸಮಿತಿ (CCS) ಒಪ್ಪಿಗೆ ನೀಡಿದೆ.* ಈ ಯುದ್ಧ ವಿಮಾನಗಳು ಮುಂದಿನ ಐದು ವರ್ಷಗಳಲ್ಲಿ ಭಾರತೀಯ ನೌಕಾಪಡೆಯಿಗೆ ಸೇರಲಿವೆ.* ಭಾರತ ಮತ್ತು ಫ್ರಾನ್ಸ್ ನಡುವೆ ಈ ಸಂಬಂಧಿತ ಒಪ್ಪಂದ ನಡೆಯಲಿದೆ.* ರಫೆಲ್ ಜೆಟ್ ತಯಾರಿಕಾ ಸಂಸ್ಥೆ ಡಸಾಲ್ಟ್ ಏವಿಯೇಷನ್ನಿಂದ ಶಸ್ತ್ರಾಸ್ತ್ರ ವ್ಯವಸ್ಥೆಯೂ ಖರೀದಿಸಲಾಗಲಿದೆ.* ಇದಕ್ಕೂ ಮೊದಲು ಭಾರತೀಯ ವಾಯುಪಡೆ 36 ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ.* ಭವಿಷ್ಯದಲ್ಲಿ ಕನಿಷ್ಠ ಎರಡು ಸ್ಕ್ವಾಡ್ರನ್ (36 ವಿಮಾನಗಳು) ರಫೆಲ್ ಖರೀದಿಯ ಸಾಧ್ಯತೆ ಇದೆ.* ಕಳೆದ ಐದು ವರ್ಷಗಳಲ್ಲಿ ಭಾರತ–ಫ್ರಾನ್ಸ್ ನಡುವೆ ಯುದ್ಧ ವಿಮಾನ ಖರೀದಿಯಲ್ಲಿ ನಿಕಟತೆಯ ಸಂಬಂಧ ಬೆಳೆದಿದೆ.* 2023ರ ಜುಲೈನಲ್ಲಿ ಜೆಟ್ ಮತ್ತು ಹೆಲಿಕಾಪ್ಟರ್ ಎಂಜಿನ್ಗಳ ಜಂಟಿ ಅಭಿವೃದ್ಧಿಗೆ ಭಾರತ–ಫ್ರಾನ್ಸ್ ಒಪ್ಪಂದ ಮಾಡಿಕೊಂಡಿವೆ.* ಫ್ರಾನ್ಸ್ ಸಹಕಾರದೊಂದಿಗೆ ಮಝಗಾಂವ್ ಡಾಕ್ ಲಿಮಿಟೆಡ್ ಆರು ಸ್ಕಾರ್ಪಿನ್ ಜಲತಾಂರ್ಗಾಮಿಗಳನ್ನು ಅಭಿವೃದ್ಧಿಪಡಿಸಿದೆ.