Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಐಎನ್ಎಸ್ ಸುದರ್ಶಿನಿ 'ಲೋಕಯಾನ-26': ಭಾರತದ ಸಮುದ್ರ ಶಕ್ತಿಯ ಜಾಗತಿಕ ಪಯಣ ಆರಂಭ.
Authored by:
Akshata Halli
Date:
23 ಜನವರಿ 2026
➤
ಭಾರತೀಯ ನೌಕಾಪಡೆಯ ತರಬೇತಿ ನೌಕೆಯಾದ
ಐಎನ್ಎಸ್ ಸುದರ್ಶಿನಿ (INS Sudarshini)
ತನ್ನ ಐತಿಹಾಸಿಕ
'ಲೋಕಯಾನ-26'
ಎಂಬ 10 ತಿಂಗಳ ದೀರ್ಘಾವಧಿಯ ಅಂತರಾಷ್ಟ್ರೀಯ ಸಮುದ್ರಯಾನವನ್ನು ಆರಂಭಿಸಿದೆ. ಕೊಚ್ಚಿಯ ನೌಕಾ ನೆಲೆ ಹಾಗೂ ದಕ್ಷಿಣ ನೌಕಾ ಕಮಾಂಡ್ನ ಮುಖ್ಯಸ್ಥರಾದ
ವೈಸ್ ಅಡ್ಮಿರಲ್ ಸಮೀರ್ ಸಕ್ಷೇನಾ
ಅವರು ಈ ಯಾನಕ್ಕೆ ಹಸಿರು ನಿಶಾನೆ ತೋರಿದರು.
➤
ಈ ನೌಕೆಯು ಸುಮಾರು 10 ತಿಂಗಳಲ್ಲಿ
22,000 ನಾಟಿಕಲ್ ಮೈಲು
ದೂರವನ್ನು ಕ್ರಮಿಸಲಿದೆ. ಒಟ್ಟು
13 ದೇಶಗಳ 18 ಬಂದರುಗಳಿಗೆ
ಭೇಟಿ ನೀಡುವ ಮೂಲಕ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದೆ. ಈ ಯಾನದಲ್ಲಿ ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಯ ಸುಮಾರು 200ಕ್ಕೂ ಹೆಚ್ಚು ತರಬೇತಿ ನಾವಿಕರು ಸಾಂಪ್ರದಾಯಿಕ ನೌಕಾಯಾನ ಮತ್ತು ನಾಯಕತ್ವದ ತರಬೇತಿ ಪಡೆಯಲಿದ್ದಾರೆ.
ವಿಶೇಷ ಕಾರ್ಯಕ್ರಮಗಳು:
=> ಫ್ರಾನ್ಸ್ನಲ್ಲಿ ನಡೆಯುವ
'Escale à Sète'
ಸಮುದ್ರ ಹಬ್ಬದಲ್ಲಿ ಭಾಗವಹಿಸುವಿಕೆ.
=>
ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನ್ಯೂಯಾರ್ಕ್ನಲ್ಲಿ ನಡೆಯಲಿರುವ
'SAIL 250'
ಅಂತರಾಷ್ಟ್ರೀಯ ಹಡಗು ಪರೇಡ್ನಲ್ಲಿ ಭಾಗಿ.
➤ ಉದ್ದೇಶ:
ಜಗತ್ತೇ ಒಂದು ಕುಟುಂಬ ಎಂಬ ಸಂದೇಶ ಸಾರುವುದು. 'ಪ್ರಾಂತೀಯ ಭದ್ರತೆ ಮತ್ತು ಅಭಿವೃದ್ಧಿಗೆ ಪರಸ್ಪರ ಸಹಕಾರ' (Maritime Cooperation for Security and Growth in the Region) ಎಂಬ ಭಾರತದ ದೃಷ್ಟಿಕೋನವನ್ನು ಉತ್ತೇಜಿಸುವುದು ಮತ್ತು
ಸಾಗರ್ (SAGAR):
'Security and Growth for All in the Region' ಎಂಬ ಕಾರ್ಯತಂತ್ರದ ಭಾಗವಾಗಿ ಸ್ನೇಹ ಹಸ್ತ ಚಾಚುವುದು.
➤ ಐಎನ್ಎಸ್ ಸುದರ್ಶಿನಿ:
ಇದು ಗೋವಾ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ದೇಶೀಯವಾಗಿ ನಿರ್ಮಿಸಲ್ಪಟ್ಟ ತರಬೇತಿ ನೌಕೆಯಾಗಿದೆ. ಇದು ಮೂರು ಪಟಗಳಿರುವ (Three-masted sailing ship) ಹಡಗಾಗಿದ್ದು, ಯುವ ನಾವಿಕರಿಗೆ ಪ್ರಾಚೀನ ನೌಕಾಯಾನ ಕಲೆಗಳನ್ನು ಕಲಿಸಲು ಬಳಸಲಾಗುತ್ತದೆ.
Take Quiz
Loading...