* ಭಾರತೀಯ ನೌಕಾಪಡೆ ಐಎನ್ಎಸ್ವಿ ಕೌಂಡಿನ್ಯ ಹೆಸರಿನ ಹಡಗನ್ನು 5ನೇ ಶತಮಾನದ ತಂತ್ರಜ್ಞಾನವನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿ, ಕಾರವಾರದ ಕದಂಬ ನೌಕಾನೆಲೆಯಲ್ಲಿ ಬುಧವಾರ ಲೋಕಾರ್ಪಣೆಗೊಳಿಸಿದೆ.* ಈ ಹಡಗಿಗೆ ಅಜಂತಾ ವರ್ಣಚಿತ್ರಗಳಿಂದ ಪ್ರೇರಣೆ ಪಡೆದಿದ್ದು, ಹಳೆಯ ಕಾಲದಂತೆ ಲೋಹವಿಲ್ಲದೇ ಕೇವಲ ತೆಂಗಿನ ನಾರು, ಮರದ ಹಲಗೆ, ದಿಮ್ಮಿಗಳು ಇತ್ಯಾದಿ ನೈಸರ್ಗಿಕ ವಸ್ತುಗಳಿಂದ ನಿರ್ಮಾಣವಾಗಿದೆ.* ಇದು ಇಂದಿನ ಹಡಗುಗಳಿಗಿಂತ ಸಂಪೂರ್ಣ ವಿಭಿನ್ನವಾಗಿದೆ.* ಹಡಗು ನಿರ್ಮಾಣದಲ್ಲಿ ಸಂಪ್ರದಾಯಬದ್ಧ ಹಾಯಿಗಳು, ಸ್ಟೇರಿಂಗ್ ವ್ಯವಸ್ಥೆಯೂ ಸೇರಿವೆ. ಹಡಗು ನಿರ್ಮಾಣದಲ್ಲಿ ಭಾಗವಹಿಸಿದ್ದ ಬಾಬು ಶಂಕರ್ ಅವರು ಇದನ್ನು ವಿಶಿಷ್ಟವಾದ ಕಲೆಯೆಂದು ವಿವರಿಸಿದರು.* ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಭಾರತದ ಐತಿಹಾಸಿಕ ವೈಭವವನ್ನು ನೆನಪಿಸಿ, ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.