* ಭಾರತ ಈಗ ಐದನೇ ತಲೆಮಾರಿನ ಫೈಟರ್ ಜೆಟ್ಗಳನ್ನು ತಯಾರಿಸಲು ಮುಂದಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಎಂಸಿಎ ಯೋಜನೆಗೆ ಅನುಮೋದನೆ ನೀಡಿದ್ದಾರೆ.* ಈ ಯೋಜನೆಯನ್ನು ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ನಿರ್ವಹಿಸಲಿದೆ. ವಿವಿಧ ಭಾರತೀಯ ಕಂಪನಿಗಳ ಸಹಕಾರದಿಂದ ಈ ಯುದ್ಧವಿಮಾನವನ್ನು ಅಭಿವೃದ್ಧಿಪಡಿಸಲು Expression of Interest (EOI) ಆಹ್ವಾನಿಸಲಾಗಿದೆ.* ಈ ಯೋಜನೆಯಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಕಂಪನಿಗಳಿಗೆ ಸಮಾನ ಅವಕಾಶ ಸಿಗಲಿದೆ. ಭಾಗವಹಿಸುವ ಎಲ್ಲ ಕಂಪನಿಗಳು ಭಾರತೀಯವಾಗಿರಬೇಕು ಎಂಬುದು ಮುಖ್ಯ ಷರತ್ತಾಗಿದೆ.* ಎಎಂಸಿಎ ಯುದ್ಧವಿಮಾನವು ಸ್ಟೀಲ್ತ್ ತಂತ್ರಜ್ಞಾನ, ಸೂಪರ್ ಸಾನಿಕ್ ವೇಗ, ಪ್ರಬಲ ಸೆನ್ಸಾರ್ ಫ್ಯೂಶನ್, ಸುಧಾರಿತ ಏವಿಯಾನಿಕ್ಸ್ ಸೇರಿದಂತೆ ಹಲವಾರು ತಂತ್ರಜ್ಞಾನಗಳನ್ನು ಹೊಂದಿರಲಿದೆ. ಯೋಜನೆ 2035ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.* ಐದನೇ ತಲೆಮಾರಿನ ಫೈಟರ್ ಜೆಟ್ ಎಂದರೆ ರಾಡಾರ್ಗೆ ಗೋಚರವಾಗದ, ವೇಗವಾಗಿ ತಿರುಗಬಲ್ಲ, ಡೇಟಾ ಫ್ಯೂಶನ್ ಮೂಲಕ ದಾಳಿ ನಡೆಸಬಲ್ಲ ಬಹುಪಾತ್ರ ಸಾಮರ್ಥ್ಯ ಹೊಂದಿರುವ ಯುದ್ಧವಿಮಾನವಾಗಿದೆ.* ಪ್ರಸ್ತುತ ಎಫ್-22 ರಾಪ್ಟರ್, ಎಫ್-35 ಲೈಟನಿಂಗ್ (ಅಮೆರಿಕಾ), ಜೆ-20 (ಚೀನಾ), ಎಸ್ಯು-57 (ರಷ್ಯಾ) ಈ ತಲೆಮಾರಿಗೆ ಸೇರಿವೆ. ಭಾರತವು ಈಗ ತನ್ನದೇ ಆದ ಅಂತಹವಿಮಾನ ನಿರ್ಮಾಣದ ಹಾದಿಯಲ್ಲಿ ಮುನ್ನಡೆಯುತ್ತಿದೆ.