* ಕೇಂದ್ರ ಸರ್ಕಾರವು ಐದನೇ ಸಮುದ್ರ ಮೀನುಗಾರಿಕೆ ಗಣತಿಗೆ ಶುಭಾರಂಭ ನೀಡಿದ್ದು, ಈ ಬಾರಿ ಮೊಬೈಲ್ ಆ್ಯಪ್ ಮೂಲಕ ದೇಶದ ಸುಮಾರು 12 ಲಕ್ಷ ಮೀನುಗಾರ ಕುಟುಂಬಗಳ ವಿವರಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಿದೆ.* ಈ ಗಣತಿಯ ನೋಡಲ್ ಏಜೆನ್ಸಿಯಾಗಿ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್ಆರ್ಐ) ಕಾರ್ಯನಿರ್ವಹಿಸುತ್ತಿದೆ.* ಗಣತಿ ಕಾರ್ಯವು ಕರಾವಳಿ ತೀರವಿರುವ ಒಂಬತ್ತು ರಾಜ್ಯಗಳಲ್ಲಿ ನಡೆಯಲಿದ್ದು, ಡಿಸೆಂಬರ್ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.* ಐಸಿಎಆರ್–ಸಿಎಂಎಫ್ಆರ್ಐ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಮೂಲಕ ದತ್ತಾಂಶವನ್ನು ನಿಖರವಾಗಿ ಮತ್ತು ಪಾರದರ್ಶಕವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಲಾಗಿದೆ.* ಮೇ ಮತ್ತು ಜೂನ್ ತಿಂಗಳಲ್ಲಿ ಮೀನುಗಾರ ಕುಟುಂಬಗಳು ವಾಸಿಸುವ ಹಳ್ಳಿಗಳ ಗಣತಿಯನ್ನು ಪೂರ್ಣಗೊಳಿಸಲಾಗುವುದು; ನಂತರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕುಟುಂಬಗಳ ವಿವರಗಳನ್ನು ಸಂಗ್ರಹಿಸಲಾಗುವುದು.* ಭೌತಿಕ ಮಾಹಿತಿಯ ಸಂಗ್ರಹಣೆಯ ಸಂದರ್ಭ ಉಂಟಾಗುವ ತಪ್ಪುಗಳನ್ನು ತಪ್ಪಿಸಲು ಈ ಆ್ಯಪ್ ವಿನ್ಯಾಸಗೊಳಿಸಲಾಗಿದೆ. ಈ ಗಣತಿ, ಮೀನುಗಾರ ಕುಟುಂಬಗಳಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಲು ಹಾಗೂ ಸೌಲಭ್ಯಗಳನ್ನು ಒದಗಿಸಲು ಸಹಾಯಕವಾಗಲಿದೆ ಎಂದು ತಿಳಿಸಲಾಗಿದೆ.