* ಐಐಟಿ ರೋಪ್ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಡ್ರೋನ್ ಸಂಸ್ಥೆಗಳು ಶೀಘ್ರದಲ್ಲೇ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದ್ದು ಸೇನಾ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿ ಎಂದು ಇರಲಿವೆ ವರದಿಯಾಗಿದೆ. * ಡ್ರೋನ್ಸ್ ಆ್ಯಂಟ್ಸ್ ಆಟೋನೊಮಸ್ ಸಿಸ್ಟಮ್ಸ್ ಸೆಂಟರ್ನಲ್ಲಿ ಸಂಶೋಧಕರು ಮತ್ತು ವಿದ್ಯಾರ್ಥಿಗಳ ತಂಡವು ಡೋನ್ ಗಳನ್ನು ನಿರ್ಮಾಣ ಮಾಡುತ್ತಿದೆ. ಇದು ಭಾರತಕ್ಕೆ ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. * ಯುದ್ಧ ಭೂಮಿಯಲ್ಲಿ ಇಳಿಯಬಹುದಾದ ಮತ್ತು ನೈಜ ಸಮಯದಲ್ಲಿ ಭೌಗೋಳಿಕ ಸ್ಥಳಗಳನ್ನು ಅಂದಾಜು ಮಾಡಬಹುದಾದ ಸ್ವಾಯತ್ತ ಡೋನ್ಗಳನ್ನು ನಿರ್ಮಿಸಲಾಗುತ್ತಿದೆ.* ಐಐಟಿ ರೋಪರ್ನಲ್ಲಿ ಎರಡು ತಾಂತ್ರಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾ ಗುತ್ತದೆ. ಮೊದಲನೆಯದು ಯುದ್ಧಪೀಡಿತ ಪ್ರದೇಶಗಳಲ್ಲಿ ಡೋನ್ ಅನ್ನು ಸುರಕ್ಷಿತವಾಗಿ ಇಳಿಸುವುದು, ಎರಡನೆಯದು ವೈಮಾನಿಕ ಪ್ರದೇಶಗಳ ಮೇಲೆ ಕಣ್ಣಾವಲಿಡುವ ರೀತಿಯಲ್ಲಿ ಡ್ರೋನ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.* ಡ್ರೋನ್ ಮೂಲಕ ಕೇವಲ ಮ್ಯಾಪಿಂಗ್ ಮಾಡುವುದಿಲ್ಲ, ದಟ್ಟವಾದ ಕಾಡು, ಪೊದೆಗಳಲ್ಲಿ ಬಿದ್ದಿರುವ ವಸ್ತುಗಳನ್ನು ಗುರುತಿಸಲು, ಅಡಗಿರುವ ಶತ್ರು ರಾಷ್ಟ್ರದ ಸೈನಿಕರು, ಭಯೋತ್ಪಾದಕರು, ಉಗ್ರರನ್ನು ಗುರುತಿಸಲು ನೆರವಾಗುತ್ತದೆ. ಸೈನಿಕರು ಗಸ್ತು ತಿರುಗುವಿಕೆಗೆ ಕಷ್ಟವಾಗುವ ಪ್ರದೇಶಗಳಲ್ಲಿ ಈ ಡ್ರೋನ್ಗಳನ್ನು ನಿಯೋಜಿಸಲಾಗುತ್ತದೆ.