* ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದ ಹೈಪರ್ ಲೂಪ್ ಯೋಜನೆ 410 ಮೀಟರ್ ಉದ್ದದ ಮಾರ್ಗವನ್ನು ಹೊಂದಿದ್ದು, ಇದು ಪ್ರಸ್ತುತ ಏಷ್ಯಾದ ಅತಿ ಉದ್ದದ ಹೈಪರ್ ಲೂಪ್ ಮಾರ್ಗವಾಗಿದೆ.* ಶೀಘ್ರವೇ ಈ ಸುರಂಗ ಮಾರ್ಗದ ವಿಸ್ತರಣೆ ಕಾರ್ಯ ನಡೆಯಲಿದ್ದು, ಬಳಿಕ ಅದು ವಿಶ್ವದಲ್ಲೇ ಅತಿ ಉದ್ದನೆಯ ಸುರಂಗ ಎನ್ನಿಸಿಕೊ ಳ್ಳಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.* ಹೈಪರ್ಲೂಪ್ ತಂತ್ರಜ್ಞಾನ ತಯಾರಾಗುತ್ತಿರುವ ಮದ್ರಾಸ್ನ ಐಐಟಿಗೆ ಭಾನುವಾರ ಭೇಟಿ ನೀಡಿದ್ದ ವೈಷ್ಣವ್, ಈ ವೇಳೆ ಅಲ್ಲಿನ ತಂತ್ರಜ್ಞಾನಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ನಿರ್ವಾತ ಪ್ರದೇಶದಲ್ಲಿ ಚಲಿಸುವ ಹೈಪರ್ಲೂಪ್ನ ಮಾದರಿಯೊಂದರ ಸಂಚಾರವನ್ನೂ ಸಚಿವರು ವೀಕ್ಷಿಸಿದರು.* ಹೈಪರ್ಲೂಪ್ ಎನ್ನುವುದು ನಿರ್ವಾತ ಪ್ರದೇಶದಲ್ಲಿ ಮ್ಯಾಗ್ನೆಟಿಕ್ ತಂತ್ರಜ್ಞಾನ ಬಳಸಿ ವಾಹನ ಚಲಿಸುವ ವಿಧಾನ. ಇದರಲ್ಲಿ ರೈಲು ಗರಿಷ್ಠ 1000 ಕಿ.ಮೀ ವೇಗ ತಲುಪುವ ಸಾಮರ್ಥ್ಯ ಹೊಂದಿರಲಿದೆ.* ‘ಸ್ವದೇಶಿ ಉಪಕರಣಗಳನ್ನು ಬಳಸಿ ಈ ಟ್ರ್ಯಾಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಟ್ರ್ಯಾಕ್ನಲ್ಲಿ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿವೆ. ಶೀಘ್ರವೇ, ಭಾರತದಲ್ಲಿ ಹೈಪರ್ಲೂಪ್ ಸಾರಿಗೆ ಅನುಷ್ಠಾನಗೊಳ್ಳುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.* ಹಳಿಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾದ ನಿರ್ವಾತ ಕೊಳವೆ ಸಾರಿಗೆ ಮಾರ್ಗವನ್ನು ಹೈಪರ್ಲೂಪ್ ಎಂದು ಕರೆಯುತ್ತಾರೆ. ಈ ಕೊಳವೆ ಮಾರ್ಗದಲ್ಲಿ ಪಾಡ್ಗಳಂತೆ ವಿನ್ಯಾಸಗೊಳಿಸಲಾದ ಕ್ಯಾಬಿನ್ಗಳಲ್ಲಿ ಪ್ರಯಾಣಿಕರು ಕುಳಿತು, ಗಂಟೆಗೆ 1,000 ಕಿ.ಮೀ. ವೇಗದಲ್ಲಿ ಸಂಚರಿಸಬಹುದು.* 2022ರ ಮೇ ನಲ್ಲಿ ಕೇಂದ್ರ ರೈಲ್ವೆ ಸಚಿವಾಲಯವು ಸ್ವದೇಶಿ ಹೈಪರ್ಲೂಪ್ ಸೇವೆ ಅಭಿವೃದ್ಧಿಗೆ ಅನುಮೋದನೆ ನೀಡಿದ್ದು, ಈ ಉದ್ದೇಶಕ್ಕಾಗಿ ಐಐಟಿ–ಮದ್ರಾಸ್ಗೆ ₹8.34 ಕೋಟಿ ಅನುದಾನ ಮಂಜೂರಾಗಿದೆ.