* ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಮತ್ತು ಭಾರತೀಯ ರೈಲ್ವೆ ಹಣಕಾಸು ನಿಗಮ (ಐಆರ್ಎಫ್ಸಿ) ಗಳ ದರ್ಜೆಯನ್ನು 'ನವರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ' ಸ್ಥಾನಮಾನಕ್ಕೆ ಉನ್ನತೀಕರಿಸಿ ಕೇಂದ್ರ ಸರ್ಕಾರ ಸೋಮವಾರ (ಮಾರ್ಚ್ 03)ಆದೇಶ ಹೊರಡಿಸಿದೆ.* ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (ಸಿಪಿಎಸ್ಇ) 2023-24ರಲ್ಲಿ ₹4,270.18 ಕೋಟಿ ವಹಿವಾಟು ಮತ್ತು ₹3,229.97 ಕೋಟಿ ನಿವ್ವಳ ಮೌಲ್ಯ ಗಳಿಸಿದೆ.* ಭಾರತೀಯ ರೈಲ್ವೆ ಹಣಕಾಸು ನಿಗಮ 2023-24ರಲ್ಲಿ ₹26,644 ಕೋಟಿ ವಹಿವಾಟು ಮತ್ತು ₹49,178 ಕೋಟಿ ನಿವ್ವಳ ಮೌಲ್ಯ ಸಾಧಿಸಿದೆ.* ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ‘ನವರತ್ನ’ ಸ್ಥಾನಮಾನಕ್ಕೆ ಉತ್ತರಣಗೊಂಡ ಐಆರ್ಸಿಟಿಸಿ ಮತ್ತು ಐಆರ್ಎಫ್ಸಿ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿ ‘ಎಕ್ಸ್’ ನಲ್ಲಿ ಸಂತಸ ವ್ಯಕ್ತಪಡಿಸಿದರು.* ಭಾರತ ಸರ್ಕಾರ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮಹಾರತ್ನ, ನವರತ್ನ ಮತ್ತು ಮಿನಿರತ್ನ ಎಂಬ ಮೂರು ವರ್ಗಗಳಾಗಿ ವಿಂಗಡಿಸಿದೆ. ಈ ಪಿಎಸ್ ಯುಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವುದು ಮತ್ತು ಅವುಗಳಲ್ಲಿ ಹೆಚ್ಚಿನ ದಕ್ಷತೆ ತರುವುದು ಈ ವರ್ಗೀಕರಣದ ಗುರಿಯಾಗಿದೆ.* ನವರತ್ನ ಸ್ಥಾನಮಾನಕ್ಕೆ ಬಡ್ತಿಯು ಎರಡೂ ಕಂಪನಿಗಳಿಗೆ ಹೆಚ್ಚಿನ ಆರ್ಥಿಕ ಸ್ವಾಯತ್ತತೆಯನ್ನು ನೀಡಲಿದೆ. ಅಂದರೆ ಈ ಕಂಪನಿಗಳು ಇನ್ನು ಮುಂದೆ ಸರ್ಕಾರದ ಪೂರ್ವಾನುಮತಿ ಇಲ್ಲದೆಯೇ 1,000 ಕೋಟಿ ರೂ. ಗಳವರೆಗೆ ಹೂಡಿಕೆ ಮಾಡಲು ಸಾಧ್ಯವಾಗಲಿದೆ. ಈ ಮೂಲಕ ಮುಂದಿನ ಬೆಳವಣಿಗೆಯ ಯೋಜನೆಗಳಲ್ಲಿ ಕಂಪನಿಗಳು ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿದೆ.