* ಮೈಕ್ರೋಸಾಫ್ಟ್ ಭಾರತದಲ್ಲಿ ಮತ್ತೊಮ್ಮೆ ಭಾರೀ ಹೂಡಿಕೆಯನ್ನು ಘೋಷಿಸಿದೆ. ₹1.58 ಲಕ್ಷ ಕೋಟಿ ರೂ. (17.5 ಬಿಲಿಯನ್ USD) ಮೌಲ್ಯದ ಈ ಮಹಾ ಹೂಡಿಕೆ, ದೇಶದ AI–First ಕನಸುಗಳು ಹಾಗೂ ಡಿಜಿಟಲ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವುದಕ್ಕೆ ಉದ್ದೇಶಿಸಲಾಗಿದೆ.* ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು, “ಜಗತ್ತಿಗೆ ಭಾರತವೇ ವಿಶ್ವಾಸಾರ್ಹ ತಂತ್ರಜ್ಞಾನ ಪಾಲುದಾರ ಎಂಬುದಕ್ಕೆ ಮೈಕ್ರೋಸಾಫ್ಟ್‌ನ ಈ ಘೋಷಣೆ ಸ್ಪಷ್ಟ ಸಾಕ್ಷಿ” ಎಂದು ಹೇಳಿದ್ದಾರೆ.* ಈ ಹೂಡಿಕೆಯ ಮೂಲಕ - ಭಾರತದಲ್ಲಿ ಕ್ಲೌಡ್, ಎಐ ಮೂಲಸೌಕರ್ಯ, ಕೌಶಲಾಭಿವೃದ್ಧಿ ಕಾರ್ಯಕ್ರಮಗಳು ವೇಗ ಪಡೆದುಕೊಳ್ಳಲಿವೆ. - ಬೆಂಗಳೂರು, ಹೈದರಾಬಾದ್, ಪುಣೆ, ಗುರುಗ್ರಾಮ್, ನೋಯ್ಡಾ ಸೇರಿ ದೇಶದಾದ್ಯಂತ ಕೆಲಸ ಮಾಡುತ್ತಿರುವ 22,000ಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳಿಗೆ ನೇರ ಪ್ರಯೋಜನ ಸಿಗಲಿದೆ. - ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ (HPC) ಸಾಮರ್ಥ್ಯ ಹೆಚ್ಚಲಿದೆ,- ಡೆವಲಪರ್‌ಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಗಳಿಗಾಗಿ ಹೊಸ ಎಐ ಉಪಕರಣಗಳು, ತರಬೇತಿ ಮತ್ತು ಮೂಲಸೌಕರ್ಯ ಲಭ್ಯವಾಗಲಿದೆ* ಇದು ಏಷ್ಯಾದಲ್ಲಿ ಮೈಕ್ರೋಸಾಫ್ಟ್ ಮಾಡಿರುವ ಎಲ್ಲಾ ಕಾಲಗಳಲ್ಲಿಯೇ ಅತ್ಯಂತ ದೊಡ್ಡ ಹೂಡಿಕೆಯಾಗಿದ್ದು  ಕಳೆದ 2 ತಿಂಗಳಲ್ಲಿ ಮೈಕ್ರೋಸಾಫ್ಟ್‌ನ ಹೂಡಿಕೆಗಳು  :--1 ) 15 ಬಿಲಿಯನ್ USD – India AI Hub (ಘೋಷಣೆ: ಅಕ್ಟೋಬರ್ 14, 2025) 2 ) 11 ಬಿಲಿಯನ್ USD – Digital Connexion ಹೂಡಿಕೆ (ನವೆಂಬರ್ 2025)* ಮೈಕ್ರೋಸಾಫ್ಟ್ ಸಿಇಒ Satya Nadella ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ಈ ಹೊಸ ಘೋಷಣೆ ಹೊರಬಿದ್ದಿದ್ದು, ಭಾರತದ AI ಮಾರ್ಗಸೂಚಿ, ಡಿಜಿಟಲ್ ಬೆಳವಣಿಗೆ ಮತ್ತು ತಂತ್ರಜ್ಞಾನ ಆದ್ಯತೆಗಳ ಕುರಿತು ಇಬ್ಬರೂ ಚರ್ಚಿಸಿದುದಾಗಿ ಕಂಪನಿ ತಿಳಿಸಿದೆ.* ಈ ಹೂಡಿಕೆಯ ಮೂಲಕ ಭಾರತವು ಜಾಗತಿಕ AI ಅಭಿವೃದ್ಧಿಯ ಕೇಂದ್ರವಾಗಿ ರೂಪುಗೊಳ್ಳಲು ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಂತಾಗಿದೆ.