* ಬೆಂಗಳೂರು ಮೂಲದ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಮತ್ತು ಏರೋಸ್ಪೇಸ್ (FWDA) ತನ್ನ AI ಚಾಲಿತ ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಎಂಡ್ಯೂರನ್ಸ್ (MALE) ಯುದ್ಧವಿಮಾನ - "FWD ಕಾಲ ಭೈರವ"ವನ್ನು ಬಿಡುಗಡೆ ಮಾಡಿದೆ.* ಕಾಲಭೈರವನ್ನು 30 ಗಂಟೆಗಳವರೆಗೆ ಹಾರಾಟ ನಡೆಸಬಲ್ಲದು ಮತ್ತು 3000 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.* FWDA ಸಂಸ್ಥಾಪಕ ಸುಹಾಸ್ ತೇಜಸ್ಕಂದ ಅವರು, ವಿದೇಶಿ ಯುದ್ಧವಿಮಾನಗಳು ಭಾರತಕ್ಕೆ ದುಬಾರಿ ಮತ್ತು ಅಪಾಯಕಾರಿಯಾದ ಡಿಜಿಟಲ್ ಅವಲಂಬನೆ ತರುತ್ತವೆ ಎಂದು ಹೇಳಿದ್ದಾರೆ.* ಪ್ರಿಡೇಟರ್ ಅಥವಾ ಇಸ್ರೇಲಿ ಸರ್ಚರ್ ಮಾದರಿಗಳಲ್ಲಿ ಬಾಹ್ಯ ಸರ್ವರ್ಗಳು ಹಾಗೂ ಎಂಬೆಡೆಡ್ ಕಿಲ್-ಸ್ವಿಚ್ ಹೀಗೆ ತಂತ್ರಜ್ಞಾನ ದುರ್ಬಲತೆಗಳಿವೆ ಎಂದು ಅವರು ಎಚ್ಚರಿಸಿದರು.* ಕಾಲ ಭೈರವ ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲ್ಪಟ್ಟಿದ್ದು, MQ-9 ರೀಪರ್ ತರದ ಯುದ್ಧವಿಮಾನಗಳಿಗಿಂತ ಕೇವಲ ಹತ್ತನೇ ಭಾಗದ ವೆಚ್ಚದಲ್ಲಿ ಕಾರ್ಯಾಚರಿಸಬಲ್ಲದು. ಇದರಿಂದ ಆತ್ಮನಿರ್ಭರ ಭಾರತ ದೃಷ್ಟಿಕೋನಕ್ಕೆ ಬಲ ದೊರಕುತ್ತದೆ.* ಈ ವಿಮಾನವು ಸ್ವಯಂಚಾಲಿತ ಸಮೂಹ ದಾಳಿ ಸಾಮರ್ಥ್ಯ, ಬಹು-ಕೋನ ನಿಖರ ದಾಳಿ ಹಾಗೂ ಶತ್ರು ವಾಯು ರಕ್ಷಣಾ ವ್ಯವಸ್ಥೆಗಳನ್ನು ತಡೆಗಟ್ಟುವ ಶಕ್ತಿ ಹೊಂದಿದೆ.* ಒಂದು ಪ್ರಿಡೇಟರ್ ನಷ್ಟವು ಸಾವಿರ ಕೋಟಿ ರೂ. ವೆಚ್ಚವಾಗಬಹುದಾದರೆ, ಅದೇ ವೆಚ್ಚದಲ್ಲಿ ಕಾಲ ಭೈರವಗಳ ಸಂಪೂರ್ಣ ಪಡೆ ರೂಪಿಸಬಹುದು.* ಕಾಲ ಭೈರವ ಶೂನ್ಯ ವಿದೇಶಿ ಅವಲಂಬನೆ ಹೊಂದಿದ್ದು, ಎಲ್ಲಾ ತಂತ್ರಜ್ಞಾನವನ್ನು ಸಂಸ್ಥೆಯೇ ಅಭಿವೃದ್ಧಿಪಡಿಸಿದೆ. ಇದು ಸುರಕ್ಷಿತ ಪೂರೈಕೆ ಸರಪಳಿಯನ್ನು ಖಚಿತಪಡಿಸಿ, ದೇಶೀಯ MRO (ಮರಮ್ಮತ್ತು ಮತ್ತು ನಿರ್ವಹಣೆ) ಪರಿಸರ ವ್ಯವಸ್ಥೆ ಒದಗಿಸುತ್ತದೆ.* FWDA ಹೇಳುವಂತೆ, ಕಾಲ ಭೈರವವು ದುಬಾರಿ ವಿದೇಶಿ ವ್ಯವಸ್ಥೆಗಳಿಗೆ ಪರ್ಯಾಯವಾಗಿದ್ದು, ಭಾರತವನ್ನು ಆಮದುದಾರ ದೇಶದಿಂದ ರಕ್ಷಣಾ ತಂತ್ರಜ್ಞಾನದ ರಫ್ತುದಾರ ರಾಷ್ಟ್ರವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ.