2024-25ರಲ್ಲಿ ₹9.83 ಲಕ್ಷ ಕೋಟಿ ಮೌಲ್ಯದ ರಫ್ತಿನಿಂದ ಗುಜರಾತ್ ಶೇ.26.6ರಷ್ಟು ಪಾಲು ಪಡೆದು ದೇಶದ ಅಗ್ರ ರಫ್ತು ರಾಜ್ಯವಾಗಿ ಹೊರಹೊಮ್ಮಿದೆ. ಪ್ರಮುಖ ರಫ್ತು ಸರಕುಗಳಲ್ಲಿ ಪೆಟ್ರೋಲಿಯಂ, ಆಭರಣ, ಔಷಧಿ ಮತ್ತು ಎಂಜಿನಿಯರಿಂಗ್ ವಸ್ತುಗಳು ಸೇರಿವೆ.ದೇಶದ ಟಾಪ್ 10 ರಫ್ತು ರಾಜ್ಯಗಳು1. ಗುಜರಾತ್: 116.33 ಶತಕೋಟಿ ಡಾಲರ್ (9.83 ಲಕ್ಷ ಕೋಟಿ ರೂ.) : ಪೆಟ್ರೋಲಿಯಂ ಉತ್ಪನ್ನಗಳು, ರತ್ನ ಮತ್ತು ಆಭರಣ, ಆರ್ಗ್ಯಾನಿಕ್ ಕೆಮಿಕಲ್ಸ್, ಔಷಧಿಗಳು, ಎಂಜಿನಿಯರಿಂಗ್ ಸರಕು ಗಳಲ್ಲಿ ಪ್ರಾಬಲ್ಯ; ಪೆಟ್ರೋಲಿಯಂ, ರಿಫೈನರಿ ರಫ್ರಿನಿಂದ 3.63 ಲಕ್ಷ ಕೋಟಿ ರೂ. ನೊಂದಿಗೆ ಮುಂಚೂಣಿಯಲ್ಲಿ ಜಾಮ್ನಗರ್.2. ಮಹಾರಾಷ್ಟ್ರ: 65.85 ಶತಕೋಟಿ ಡಾಲರ್ (5.57 ಲಕ್ಷ ಕೋಟಿ ರೂ.); ರತ್ನ ಮತ್ತು ಆಭರಣ, ಎಂಜಿನಿಯರಿಂಗ್ ಸರಕು, ಔಷಧಿಗಳು ಪ್ರಮುಖ ರಫ್ತು. ಮುಂಬೈ ಮತ್ತು ಪುಣೆ ಮುಖ್ಯ ಕೇಂದ್ರಗಳು.3. ತಮಿಳುನಾಡು: 52.07 ಶತಕೋಟಿ ಡಾಲರ್ (4.40 ಲಕ್ಷ ಕೋಟಿ ರೂ.); ಎಲೆಕ್ಟ್ರಾನಿಕ್ಸ್, ಜವಳಿ, ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಧನೆ. ಚೆನ್ನೈ, ಕೊಯಮತ್ತೂರಿನ ಕೊಡುಗೆ ಅಧಿಕ.4.ಕರ್ನಾಟಕ: 30.48 ಶತಕೋಟಿ ಡಾಲರ್ (2.58 ಲಕ್ಷ ಕೋಟಿ ರೂ.); ಐಟಿ ಸೇವೆಗಳು, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಉತ್ಪನ್ನಗಳ ರಫ್ತು ಹೆಚ್ಚು. ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರವಾದ ಬೆಂಗಳೂರಿನ ಕೊಡುಗೆಯೇ ಅಧಿಕ.5. ಉತ್ತರ ಪ್ರದೇಶ: 21.98 ಶತಕೋಟಿ ಡಾಲರ್ (1.86 ಲಕ್ಷ ಕೋಟಿ ರೂ.); ಭಾರತದ ರಪ್ತಿನ ಶೇ. 5ರಷ್ಟು ಕೊಡುಗೆ; ಚರ್ಮ, ಜವಳಿ, ಕೃಷಿ ಉತ್ಪನ್ನಗಳೇ ಹೆಚ್ಚು. ಅಮೆರಿಕವೇ ಪ್ರಮುಖ ಗಮ್ಯಸ್ಥಾನ.6. ಆಂಧ್ರಪ್ರದೇಶ: 20.78 ಶತಕೋಟಿ ಡಾಲರ್ (1.76 ಲಕ್ಷ ಕೋಟಿ ರೂ.); ಸೀಪುಡ್, ಔಷಧಿಗಳು, ಕೃಷಿ ರಫ್ತು ಗಮನಾರ್ಹ. ಸೀಫುಡ್ಗೆ ವಿಶಾಖಪಟ್ಟಣಂ ಪ್ರಮುಖ ಬಂದರು.7. ತೆಲಂಗಾಣ: 19.12 ಶತಕೋಟಿ ಡಾಲರ್ (1.62 ಲಕ್ಷ ಕೋಟಿ ರೂ.); ಔಷಧಿಗಳು, ಐಟಿ ಸೇವೆಗಳು, ರಾಸಾಯನಿಕ ಕ್ಷೇತ್ರಗಳಲ್ಲಿ ಸಾಧನೆ. ಔಷಧ ಮತ್ತು ತಂತ್ರಜ್ಞಾನ ಕೇಂದ್ರವಾಗಿ ಹೈದರಾಬಾದ್ ಕೊಡುಗೆ ದೊಡ್ಡದು.8. ಪಶ್ಚಿಮ ಬಂಗಾಳ: 12.66 ಶತಕೋಟಿ ಡಾಲರ್ (1.07 ಲಕ್ಷ ಕೋಟಿ ರೂ.); ಕಬ್ಬಿಣ, ಉಕ್ಕು, ಚರ್ಮ, ಚಹಾದ ರಫ್ತು ಅಧಿಕ. ಕೋಲ್ಕತ್ತಾ ಪ್ರಮುಖ ಕೇಂದ್ರ.9. ಹರಿಯಾಣ: 10-12 ಶತಕೋಟಿ ಡಾಲರ್; ಆಟೋ ಮೊಬೈಲ್, ಜವಳಿ, ಎಲೆಕ್ಟ್ರಾನಿಕ್ಸ್ನಲ್ಲಿ ಗಮನಾರ್ಹ ಸಾಧನೆ, ಗುರ್ಗಾಂವ್, ಫರಿದಾಬಾದ್ ಪ್ರಮುಖ ಕೇಂದ್ರಗಳು.10. ಒಡಿಶಾ : 8-10 ಶತಕೋಟಿ ಡಾಲರ್; ಖನಿಜಗಳು, ಲೋಹಗಳು, ಸೀಫುಡ್ ರಫ್ತು ಹೆಚ್ಚು. ಕರಾವಳಿ ಮತ್ತು ಗಣಿಗಾರಿಕೆ ಸಾಮರ್ಥ್ಯ ಅಧಿಕ ಬಳಕೆ.* ಜುಲೈ 2024ರಲ್ಲಿ ಭಾರತದ ಸೇವಾ ವಲಯದ ಪಿಎಂಐ ಸೂಚ್ಯಂಕ 60.5ರಷ್ಟು ಆಗಿದ್ದು, ಇದು ಕಳೆದ 11 ತಿಂಗಳ ಗರಿಷ್ಠ ಮಟ್ಟ. ಹೊಸ ರಫ್ತು ಆರ್ಡರ್ಗಳ ಹೆಚ್ಚಳದಿಂದ ಈ ಬೆಳವಣಿಗೆ ನಡೆದಿದೆ.* ಭಾರತೀಯ ರಫ್ತುದಾರರಿಗೆ ವಿದೇಶಿ ಮಾರುಕಟ್ಟೆ ಪ್ರವೇಶಕ್ಕೆ ಸಹಾಯ ಮಾಡಲು ಅಮೆಜಾನ್ ಮತ್ತು ಎಫ್ಐಇಒ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ.* 2024ರಲ್ಲಿ ಭಾರತದಲ್ಲಿ 84,262 ಆನ್ಲೈನ್ ಗೇಮಿಂಗ್ ಖಾತೆಗಳ ಮಾಹಿತಿ ಸೋರಿಕೆಯಾಗಿದೆ. ಥಾಯ್ಲೆಂಡ್ (1.6 ಲಕ್ಷ), ಫಿಲಿಪೈನ್ಸ್, ವಿಯೆಟ್ನಾಂ ಮುಂತಾದ ದೇಶಗಳಲ್ಲಿ ಕೂಡ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ. ಈ ಮಾಹಿತಿ ಕ್ಯಾಸ್ಪರ್ಸ್ಕಿ ಕಂಪನಿಯ ಸಮೀಕ್ಷೆಯಿಂದ ಬಹಿರಂಗವಾಗಿದೆ.