* ವಿಶ್ವ ರಾಜಕೀಯದಲ್ಲಿ ಪ್ರಮುಖ ಬದಲಾವಣೆಯ ಚಿಹ್ನೆಗಳೊಂದಿಗೆ ಸೌದಿ ಅರೇಬಿಯಾ ಅಧಿಕೃತವಾಗಿ ಬ್ರಿಕ್ಸ್ ಗುಂಪಿಗೆ ಸೇರ್ಪಡೆಯಾಗಿದೆ. ಹಾಗೂ ಸೌದಿ ಅರೇಬಿಯಾ ವಿಶ್ವದ ಪ್ರಮುಖ ತೈಲ ಉತ್ಪಾದಿಸುವ ದೇಶವಾಗಿದೆ.* ಇಲ್ಲಿಯವರೆಗೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿದ್ದ ಬ್ರಿಕ್ಸ್ ಇತ್ತೀಚೆಗೆ ತನ್ನ ವಿಸ್ತರಣೆಯನ್ನು ಘೋಷಿಸಿತು ಮತ್ತು ಈ ವಿಸ್ತರಣೆಯು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಈಜಿಪ್ಟ್, ಇರಾನ್ ಮತ್ತು ಇಥಿಯೋಪಿಯಾವನ್ನು ಒಳಗೊಂಡಿದೆ.