* 2025ರ ದಸರಾ ಮಹೋತ್ಸವಕ್ಕಾಗಿ ಅರಣ್ಯ ಇಲಾಖೆ ಮತ್ತೊಮ್ಮೆ 59 ವರ್ಷ ವಯಸ್ಸಿನ ಅಭಿಮನ್ಯು ಆನೆಯನ್ನು ಅಂಬಾರಿ ಹೊರುವ ಮುಖ್ಯ ಆನೆ (ಗಜಪಡೆಯ ನಾಯಕ) ಆಗಿ ಆಯ್ಕೆ ಮಾಡಿದೆ. * ಅಭಿಮನ್ಯು ಈಗಲೂ ಆರೋಗ್ಯವಾಗಿದ್ದು, ಫಿಟ್ ಅಂಡ್ ಫೈನ್ ಆಗಿರುವುದರಿಂದ ಈ ಬಾರಿಯೂ ಅವನೇ ಅಂಬಾರಿ ಹೊರುತ್ತಾನೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.* ಅಭಿಮನ್ಯುವಿನೊಂದಿಗೆ ಮಹೇಂದ್ರ, ಧನಂಜಯ, ಏಕಲವ್ಯ ಸೇರಿ ಹಲವು ಆನೆಗಳು ಲೈನ್ನಲ್ಲಿವೆ. ವಿಶೇಷವಾಗಿ ಏಕಲವ್ಯನು ಈ ಬಾರಿ ಹೆಚ್ಚು ಧೈರ್ಯ ತೋರಿಸಿದ್ದು, ಭವಿಷ್ಯದಲ್ಲಿ ಉತ್ತಮ ಅಂಬಾರಿ ಆನೆ ಆಗುವ ಸಾಧ್ಯತೆಯಿದೆ.* ಅಭಿಮನ್ಯು ಈಗ 59 ವರ್ಷದ್ದು. ಕೇಂದ್ರ ಅರಣ್ಯ ಸಚಿವಾಲಯದ ಮಾರ್ಗಸೂಚಿಯ ಪ್ರಕಾರ, 60 ವರ್ಷದ ಮೇಲೆ ಆನೆಗಳಿಗೆ ಭಾರ ಹೊರುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಈ ಬಾರಿ ಅಂಬಾರಿ ಹೊರುವ ಅವಕಾಶವು ಅಭಿಮನ್ಯುವಿಗೆ ಕೊನೆಯದಾಗಬಹುದೆಂಬ ಅನಿಶ್ಚಿತತೆಯೂ ಇದೆ.* ಆಗಸ್ಟ್ 4ರಂದು ಮೈಸೂರಿಗೆ ಗಜಪಡೆ ಆಗಮಿಸಲಿದೆ. 6 ಕ್ಯಾಂಪುಗಳಿಂದ ಆನೆಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಹೆಣ್ಣು ಆನೆಗಳಿಗೆ ಗರ್ಭಪರೀಕ್ಷೆಯನ್ನೂ ಮಾಡಲಾಗಿದೆ. ಅಂತಿಮವಾಗಿ ದಸರಾ ಹೈಪವರ್ ಕಮಿಟಿ ಆನೆಗಳ ಹೆಲ್ತ್ ಕಾರ್ಡ್ ಪರಿಶೀಲಿಸಿ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.