* ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರಾದ ಡಾ. ಟೆಡ್ರೊಸ್ ಅಧಾನಮ್ ರವರು ಭಾರತದ ಆಯುಷ್ಮಾನ್ ಭಾರತ್ ಯೋಜನೆಯನ್ನು ಶ್ಲಾಘಿಸಿದ್ದಾರೆ. ಆರೋಗ್ಯ ರಕ್ಷಣೆ ಮತ್ತು ಯೋಜನೆಗಳನ್ನು ಮುನ್ನಡೆಸುತ್ತಿರುವ ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.* ಗುಜರಾತಿನ ಗಾಂಧಿನಗರದಲ್ಲಿ ನಡೆಯುತ್ತಿರುವ ಜಿ20 ಆರೋಗ್ಯ ಸಚಿವರ ಸಭೆಯಲ್ಲಿ  ಮಾತನಾಡಿದ ಡಾ. ಟೆಡ್ರೊಸ್ ರವರು ಭಾರತದ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.