* ಮೊಬೈಲ್ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ (COO) ಭಾರತ ಮೂಲಕ ಸಾಬಿಹ್ ಖಾನ್ (58) ಅವರನ್ನು ನೇಮಕ ಮಾಡಿದೆ.* ಕಳೆದ 30 ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಾಬಿಹ್ ಖಾನ್ ಅವರು ಪ್ರಸ್ತುತ ಕಾರ್ಯನಿರ್ವಹಣಾ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಿವೃತ್ತಿಯಾಗಲಿರುವ ಸಿಒಒ ಜೆಫ್ ವಿಲಿಯಮ್ಸ್ ಅವರ ಜಾಗಕ್ಕೆ ಸಾಬಿಹ್ ಖಾನ್ ಅವರು ನೇಮಕಗೊಳ್ಳುತ್ತಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.* ಜೆಫ್ ವಿಲಿಯಮ್ಸ್ ಅವರು 1995 ರಲ್ಲಿ ಆಪಲ್ನ ಖರೀದಿ ಗುಂಪಿಗೆ ಸೇರುವ ಮೊದಲು, ಅವರು GE ಪ್ಲಾಸ್ಟಿಕ್ಸ್ನಲ್ಲಿ ಅಪ್ಲಿಕೇಶನ್ಗಳ ಅಭಿವೃದ್ಧಿ ಎಂಜಿನಿಯರ್ ಮತ್ತು ಪ್ರಮುಖ ಖಾತೆ ತಾಂತ್ರಿಕ ನಾಯಕರಾಗಿ ಕೆಲಸ ಮಾಡಿದ್ದರು.* 1966ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಜನಿಸಿದ್ದ ಖಾನ್, ತಮ್ಮ ಶಾಲಾ ಶಿಕ್ಷಣವನ್ನು ಸಿಂಗಪುರದಲ್ಲಿ ಪೂರೈಸಿದ್ದರು. ನಂತರ ಅಮೆರಿಕದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಉನ್ನತ ಪದವಿ ಪಡೆದಿದ್ದಾರೆ.* 3 ದಶಕಗಳ ಕಾಲ ಆ್ಯಪಲ್ನಲ್ಲಿ ಸೇವೆ ಸಲ್ಲಿಸಿರುವ ಖಾನ್ ಅವರು 2019ರಲ್ಲಿ ಕಾರ್ಯನಿರ್ವಹಣಾ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.* ಖಾನ್ ಅವರು ಆ್ಯಪಲ್ ಉತ್ನನ್ನಗಳ ಜಾಗತಿಕ ಪೂರೈಕೆ ಸರಪಳಿ, ಯೋಜನೆ, ಸಂಗ್ರಹಣೆ, ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಉತ್ಪನ್ನ ಪೂರೈಕೆಯ ಮೇಲ್ವಿಚಾರಣೆ ನಡೆಸುತ್ತಿದ್ದರು.