* ಆತ್ಮಹತ್ಯೆ ಪ್ರಕರಣಗಳನ್ನು ತಡೆಯಬೇಕಾದ ವೈದ್ಯಕೀಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೇ ಆತ್ಮಹತ್ಯೆಗೆ ಶರಣಾಗುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹಾಗೂ ಬ್ರಿಟನ್ ವಿಶ್ವವಿದ್ಯಾಲಯಗಳು, ಕರ್ನಾಟಕದಲ್ಲೇ ಸಂಶೋಧನಾ ಕೇಂದ್ರ ಸ್ಥಾಪಿಸಲು ಒಪ್ಪಿಕೊಂಡಿವೆ.* ಖಿನ್ನತೆ, ಆರೋಗ್ಯ ಸಮಸ್ಯೆ, ಸಾಲ, ಚಟಗಳು ಮುಂತಾದ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ, ಕಾರಣಗಳ ಅಧ್ಯಯನ, ಆತ್ಮವಿಶ್ವಾಸ ತುಂಬುವ ತರಬೇತಿ, ಮಾದಕ ವಸ್ತು ಚಟ ತಪ್ಪಿಸುವ ಮಾರ್ಗದರ್ಶನ ಮತ್ತು ಮುಂಜಾಗ್ರತಾ ಕ್ರಮಗಳಿಗೆ ಒತ್ತು ನೀಡಲಾಗುತ್ತದೆ.* ಬ್ರಿಟನ್ನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಕರ್ನಾಟಕದ ಸರ್ಕಾರಿ ಶಾಲಾ-ಕಾಲೇಜುಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ನಿರ್ಧಾರ ಕೈಗೊಂಡಿದ್ದಾರೆ.* ಅಲ್ಲದೆ ಎನ್ಆರ್ಐ ಕೋಟಾಗಳ ಸದುಪಯೋಗ ಹಾಗೂ ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರವೇಶ ಕಲ್ಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.* ಬ್ರಿಟನ್ನಲ್ಲಿ ನಡೆಯುವ ಎಂಆರ್ಸಿಪಿ (MRCP) ವೈದ್ಯಕೀಯ ಪರೀಕ್ಷೆಯನ್ನು ಕರ್ನಾಟಕದಲ್ಲೇ ನಡೆಸುವಂತೆ ಸಚಿವ ಶರಣ ಪ್ರಕಾಶ ಪಾಟೀಲ ಮನವಿ ಮಾಡಿದ್ದಾರೆ. ಇದರಿಂದ ಕರ್ನಾಟಕದ ವೈದ್ಯಕೀಯ ಪದವೀಧರರಿಗೆ ವಿದೇಶ ಪ್ರವಾಸದ ತೊಂದರೆ ಕಡಿಮೆಯಾಗಲಿದೆ.