* ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದ 35 ವರ್ಷದ ಆಟಗಾರ ಸ್ವೀವ್ ಸ್ಮಿತ್ ಏಕದಿನ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. * ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಸ್ಮಿತ್, ಇನ್ನು ಮುಂದೆ ಟೆಸ್ಟ್ ಹಾಗೂ ಟಿ–20 ಮಾದರಿಗಳಲ್ಲಿ ಮುಂದುವರಿಯಲಿದ್ದಾರೆ.* ಲೆಗ್ ಸ್ಪಿನ್ನರ್ ಆಲ್ರೌಂಡರ್ ಆಗಿ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಸ್ಮಿತ್ ಆಸ್ಟ್ರೇಲಿಯಾ ಪರ ಈವರೆಗೆ 169 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 153 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 12 ಶತಕ ಹಾಗೂ 35 ಅರ್ಧಶತಕಗಳೊಂದಿಗೆ ಒಟ್ಟು 5727 ರನ್ ಕಲೆಹಾಕಿದ್ದಾರೆ. ಅಲ್ಲದೆ 2015 ಮತ್ತು 2023ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. 2016ರಲ್ಲಿ ನ್ಯೂಜಿಲೆಂಡ್ ವಿರುದ್ಧ 164 ರನ್ ಗಳಿಸಿರುವುದು ಸ್ಮಿತ್ ಅತ್ಯಧಿಕ ಸ್ಕೋರ್. 28 ವಿಕೆಟ್ ಕಬಳಿಸಿದ್ದಾರೆ. 90 ಕ್ಯಾಚ್ಗಳನ್ನು ಹಿಡಿದಿದ್ದಾರೆ.* ‘ದಾರಿ ಬದಲಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ಭಾವಿಸುತ್ತಿದೆ’ ಎಂದು ಹೇಳಿಕೊಂಡಿದ್ದಾರೆ. ‘ಇದೊಂದು ಉತ್ತಮ ಪ್ರಯಾಣವಾಗಿದೆ. ನಾನು ಈ ಪ್ರಯಾಣದ ಪ್ರತಿ ಕ್ಷಣವನ್ನೂ ಆನಂದಿಸಿದ್ದೇನೆ. ಎರಡು ವಿಶ್ವಕಪ್ ಗೆಲ್ಲುವುದು ಒಂದು ದೊಡ್ಡ ಸಾಧನೆ. ಈ ಅವಧಿಯಲ್ಲಿ ತಂಡದ ಅನೇಕ ಸದಸ್ಯರು ಜೊತೆಗಿದ್ದರು. 2027ರ ಏಕದಿನ ವಿಶ್ವಕಪ್ಗೆ ತಯಾರಿ ನಡೆಸಲು ಈಗ ಉತ್ತಮ ಅವಕಾಶ. ಹೀಗಾಗಿ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಿವೃತ್ತಿ ನಿರ್ಧಾರ ತೆಗೆದುಕೊಂಡಿರುವುದಾಗಿ’ ಸ್ಟೀವ್ ಸ್ಮಿತ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದ್ದಾರೆ.