* ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ತ್ರಿಶತಕ ದಾಖಲಿಸಿದ ಬಾಬ್ ಕೌಪರ್ (84) ಮೇ 11ರಂದು, ರವಿವಾರ ಮೆಲ್ಬರ್ನ್ನಲ್ಲಿ ನಿಧನ ಹೊಂದಿದರು. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.* 1964ರಿಂದ 1968ರ ಅವಧಿಯಲ್ಲಿ ಆಸ್ಟ್ರೇಲಿಯ ಪರವಾಗಿ 27 ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿದ ಕೌಪರ್ ಅವರು, 46.84ರ ಸರಾಸರಿಯಲ್ಲಿ 2,061 ರನ್ ಗಳಿಸಿದ್ದಾರೆ.* ಇದರಲ್ಲಿ 5 ಶತಕಗಳೂ ಸೇರಿವೆ. ಪಾರ್ಟ್ಟೈಮ್ ಸ್ಪಿನ್ ಬೌಲರ್ ಆಗಿಯೂ ಅವರು 36 ವಿಕೆಟ್ ಗಳಿಸಿದ್ದರು.* ಎಡಗೈ ಬ್ಯಾಟ್ಸ್ಮನ್ ಆಗಿದ್ದ ಬಾಬ್ ಕೌಪರ್, 1966ರಲ್ಲಿ ಇಂಗ್ಲೆಂಡ್ ವಿರುದ್ಧ ಮೆಲ್ಬರ್ನ್ನಲ್ಲಿ ನಡೆದ ಟೆಸ್ಟ್ನಲ್ಲಿ 307 ರನ್ ಬಾರಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 12 ಗಂಟೆಗಳ ಕಾಲ ಕ್ರೀಸ್ನಲ್ಲಿ ಉಳಿದ ಅವರು, 589 ಎಸೆತಗಳನ್ನು ಎದುರಿಸಿ 20 ಬೌಂಡರಿಗಳನ್ನು ಬಾರಿಸಿದ್ದರು. ಈ ತ್ರಿಶತಕವು 20ನೇ ಶತಮಾನದಲ್ಲಿ ಆಸ್ಟ್ರೇಲಿಯ ನೆಲದಲ್ಲಿ ದಾಖಲಾಗಿದ ಏಕೈಕ ತ್ರಿಶತಕವಾಗಿತ್ತು.* ಅಡಿಲೇಡ್ನಲ್ಲಿ ನಡೆದಿದ್ದ ಹಿಂದಿನ ಟೆಸ್ಟ್ನಲ್ಲಿ 12ನೇ ಆಟಗಾರರಾಗಿದ್ದ ಕೌಪರ್ ಅವರನ್ನು, ತವರಿನಲ್ಲಿ ನಡೆದ ಟೆಸ್ಟ್ಗಾಗಿ ಮತ್ತೆ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು.* ಬಾಬ್ ಕೌಪರ್ ಅವರು ಐಸಿಸಿ ಮ್ಯಾಚ್ ರೆಫ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಕ್ರಿಕೆಟ್ಗೆ ನೀಡಿದ ಕೊಡುಗೆಯನ್ನು ಮನಗಂಡು, 2023ರಲ್ಲಿ “ಮೆಡಲ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ” ಗೌರವಕ್ಕೆ ಭಾಜನರಾಗಿದ್ದರು.