* ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಕೋಚ್ ಬಾಬ್ ಸಿಂಪ್ಸನ್ (89) ಅವರು ನಿಧನರಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.* ಸಿಂಪ್ಸನ್ ಅವರು 1957 ರಿಂದ 1978ರೊಳಗೆ 62 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 10 ಶತಕ ಮತ್ತು 27 ಅರ್ಧಶತಕ ಗಳಿಸಿದ್ದಾರೆ. ಲೆಗ್ಸ್ಪಿನ್ ಬೌಲಿಂಗ್ನಲ್ಲಿ 71 ವಿಕೆಟ್ ಪಡೆದು, 110 ಕ್ಯಾಚ್ಗಳನ್ನು ಹಿಡಿದಿದ್ದಾರೆ. 39 ಟೆಸ್ಟ್ಗಳಲ್ಲಿ ನಾಯಕತ್ವ ವಹಿಸಿದ್ದರು.* ಅವರು 1968ರಲ್ಲಿ ಕ್ರಿಕೆಟ್ಗೆ ವಿದಾಯ ಹೇಳಿದರೂ, 1977ರಲ್ಲಿ ಪ್ಯಾಕರ್ ವಿಶ್ವ ಸರಣಿಯಿಂದ ಆಟಗಾರರು ದೂರವಾದಾಗ 41ನೇ ವಯಸ್ಸಿನಲ್ಲಿ ಮತ್ತೆ ಮರಳಿದರು.* ಆಟಗಾರರಾಗಿ ಶ್ರೇಷ್ಠ ಸ್ಲಿಪ್ ಫೀಲ್ಡರ್, ಆಕರ್ಷಕ ಆರಂಭ ಬ್ಯಾಟ್ಸ್ಮನ್ ಹಾಗೂ ಉಪಯುಕ್ತ ಬೌಲರ್ ಆಗಿ ಪ್ರಸಿದ್ಧರಾಗಿದ್ದರು. ಕೋಚ್ ಆಗಿ ಶಿಸ್ತು ಮೂಡಿಸಿ, 1987ರ ವಿಶ್ವಕಪ್ ಸೇರಿದಂತೆ ಆ್ಯಷಸ್ ಮತ್ತು ಫ್ರಾಂಕ್ ವೊರೆಲ್ ಟ್ರೋಫಿಯನ್ನು ತಂಡಕ್ಕಿತ್ತರು.* 1990ರ ದಶಕದ ಕೊನೆಯಲ್ಲಿ ಭಾರತ ಸೇರಿದಂತೆ ಲ್ಯಾಂಕಾಶೈರ್ ಮತ್ತು ನೆದರ್ಲೆಂಡ್ಸ್ ತಂಡಕ್ಕೂ ತರಬೇತಿ ನೀಡಿದ್ದರು. ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅವರನ್ನು “ತಮ್ಮ ಪ್ರಗತಿಗೆ ನೆರವಾದ ಶ್ರೇಷ್ಠ ಕೋಚ್” ಎಂದು ಹೊಗಳಿದ್ದರು.