* ನಗರದಲ್ಲಿ ಸುಳ್ಳು ಆಸ್ತಿ ವಿವರ ನೀಡಿದ 26 ಸಾವಿರಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿದೆ.* ಅವರು ಕಾವೇರಿ ತಂತ್ರಾಂಶದಲ್ಲಿರುವ ವಾಸ್ತವ ವಿಸ್ತೀರ್ಣಕ್ಕಿಂತ ಕಡಿಮೆ ಪ್ರಮಾಣದ ವಿಸ್ತೀರ್ಣವನ್ನು ತೆರಿಗೆ ಪಾವತಿಗೆ ಘೋಷಿಸಿರುವುದು ಪತ್ತೆಯಾಗಿದೆ.* ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯನ್ನು ಕೆಲವು ಮಾಲೀಕರು ದುರ್ಬಳಕೆ ಮಾಡಿಕೊಂಡು, ಕಡಿಮೆ ತೆರಿಗೆ ಪಾವತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಆನ್ಲೈನ್ ಮೂಲಕ ನೋಟಿಸ್ಗಳನ್ನು ಜಾರಿಗೊಳಿಸುತ್ತಿದೆ.* ನೋಟಿಸ್ ನಂತರ 15 ದಿನಗಳಲ್ಲಿ ಉತ್ತರ ಇಲ್ಲದಿದ್ದರೆ, ಡಿಮ್ಯಾಂಡ್ ನೋಟ್ ನೀಡಲಾಗುತ್ತದೆ. ನಂತರ 30 ದಿನಗಳಲ್ಲಿ ಬಾಕಿ ಪಾವತಿಸದಿದ್ದರೆ, ಆಸ್ತಿಯನ್ನು ಬಿಬಿಎಂಪಿಯೊಂದಿಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಆಸ್ತಿಯ ಮಾರಾಟ ಅಥವಾ ವರ್ಗಾವಣೆ ಅಸಾಧ್ಯವಾಗುತ್ತದೆ.* ಬಾಕಿ ತೆರಿಗೆ ಪಾವತಿಸದ ಆಸ್ತಿಗಳಿಗೆ ಇ-ಖಾತಾ ಡೌನ್ಲೋಡ್ ಮಾಡುವ ಅವಕಾಶವನ್ನೂ ನಿರ್ಬಂಧಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.