* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಶಾನ್ಯ ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಬೇಕಾದ ಪೂರಕ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಉಲ್ಲೇಖಿಸಿದರು.* ಅಸ್ಸಾಂ ಮೂಲದ ಘಟಕದಿಂದ ಶೀಘ್ರದಲ್ಲೇ ಮೊದಲ "ಮೇಡ್ ಇನ್ ಇಂಡಿಯಾ" ಚಿಪ್ ಬಿಡುಗಡೆಯಾಗಲಿದೆ ಎಂದು ಅವರು ಘೋಷಿಸಿದರು.* ಹೊಸದಿಲ್ಲಿಯಲ್ಲಿ ನಡೆದ 'ಉದಯಿಸುತ್ತಿರುವ ಈಶಾನ್ಯ ಭಾರತದ ಹೂಡಿಕೆದಾರರ ಶೃಂಗಸಭೆ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. * ಈಶಾನ್ಯ ಭಾರತದ ಕೈಗಾರಿಕ ಅಭಿವೃದ್ಧಿಗೆ ಅಪಾರ ಅವಕಾಶಗಳಿದ್ದು, ಸೆಮಿಕಂಡಕ್ಟರ್ ತಯಾರಿಕೆಯು ಹೈಟೆಕ್ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರದೇಶದ ಸ್ಥಾನವನ್ನು ಗಟ್ಟಿ ಮಾಡುತ್ತದೆ ಎಂದರು.* ಆರ್ಥಿಕ ಬೆಳವಣಿಗೆಯಲ್ಲಿ ಈಶಾನ್ಯ ಭಾರತದ ಮಹತ್ವವನ್ನು ಹೊಗಳಿದ ಪ್ರಧಾನಿ, ಆಸಿಯಾನ್ ದೇಶಗಳೊಂದಿಗೆ ಭಾರತ ನಡೆಸುತ್ತಿರುವ 125 ಶತಕೋಟಿ ಡಾಲರ್ ವ್ಯಾಪಾರ ಮುಂದಿನ ವರ್ಷಗಳಲ್ಲಿ 200 ಶತಕೋಟಿಗೆ ಏರಲಿದೆ ಎಂದರು. ಈ ವ್ಯಾಪಾರದ ಪ್ರಮುಖ ಸೇತುವೆಯಾಗಿರುವುದು ಈಶಾನ್ಯ ರಾಜ್ಯಗಳೆಂದು ಹೇಳಿದರು.* ಸಂಬಂಧಿತ ಮೂಲಸೌಕರ್ಯಗಳ ಅಭಿವೃದ್ಧಿಯ ಭಾಗವಾಗಿ ಕಲಾದನ್ ಮಲ್ಟಿಮೋಡಲ್ ಯೋಜನೆ, ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ಹೆದ್ದಾರಿ, ಹಾಗೂ ಗುವಾಹಟಿ, ಇಂಫಾಲ್, ಅಗರ್ತಲಾ ಲಾಜಿಸ್ಟಿಕ್ಸ್ ಕೇಂದ್ರಗಳ ಅಭಿವೃದ್ಧಿಯ ಬಗ್ಗೆ ವಿವರಿಸಿದರು.