* ಜಾಗತಿಕ ವ್ಯಾಪಾರ ನೀತಿಯ ಅನಿಶ್ಚಿತತೆಯ ನಡುವೆಯೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿತ್ತೀಯ ನೀತಿ ಸಮಿತಿ (MPC) ಬುಧವಾರ (ಆ.06) ಶೇ.5.5ರ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ.* ಆ.4ರಿಂದ 6ರವರೆಗೆ RBI ಗವರ್ನರ್ ಸಂಜಯ್ ಮಲೋತ್ರಾ ನೇತೃತ್ವದಲ್ಲಿ ನಡೆದ MPC ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.* ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಬೆಳವಣಿಗೆ ಆಧಾರದ ಮೇಲೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು MPC ತಿಳಿಸಿದೆ.* ಡೆಪಾಸಿಟ್ ಸೌಲಭ್ಯ ಬಡ್ಡಿದರ ಶೇ.5.25ರಲ್ಲಿಯೇ, ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ಹಾಗೂ ಬ್ಯಾಂಕ್ ಬಡ್ಡಿದರ ಶೇ.5.75ರಲ್ಲಿಯೇ ಮುಂದುವರೆಯಲಿದೆ.* ಸಂಜಯ್ ಮಲೋತ್ರಾ ಅವರು ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ನಂತರದ ಮೊದಲ MPC ಸಭೆಯಲ್ಲಿ ಶೇ.6.50ರ ರೆಪೋ ದರವನ್ನು ಶೇ.25 ಬೇಸಿಸ್ ಪಾಯಿಂಟ್ಸ್ ಇಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.