* ಜಪಾನಿನಲ್ಲಿ ಹಿಂದಿನ ತ್ರೈಮಾಸಿಕದಲ್ಲಿ ಎಕಾನಮಿ 3.3% ಕುಸಿತವಾಗಿದ್ದು, ದೇಶದ ಒಟ್ಟು ದೇಶೀಯ ಉತ್ಪನ್ನ (GDP) ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿ ವಾರ್ಷಿಕ 0.4%ರಷ್ಟು ಕುಸಿಯಿತು. ಸದ್ಯ ಅಮೆರಿಕ, ಚೀನಾ, ಜರ್ಮನಿ, ಜಪಾನ್‌, ಭಾರತ ಕ್ರಮವಾಗಿ ಜಗತ್ತಿನ ಟಾಪ್‌ 5 ಆರ್ಥಿಕತೆಗಳಾಗಿವೆ. ಜರ್ಮನಿ ನಾಲ್ಕರಿಂದ ಮೂರನೇ ಸ್ಥಾನಕ್ಕೆ ಏರಿದೆ. ಜಪಾನ್‌ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಎಂಬ ಬಿರುದನ್ನು ಕಳೆದುಕೊಂಡಿದೆ.* 2010ರಲ್ಲಿ ಚೀನಾವು ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಜಪಾನ್ ಅನ್ನು ಹಿಂದಿಕ್ಕಿತ್ತು. ಅಲ್ಲದೇ, ಕಳೆದ ವರ್ಷ ಜಪಾನ್ ನಾಲ್ಕನೇ ಸ್ಥಾನಕ್ಕೆ ಕುಸಿಯುತ್ತದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು ಅಂದಾಜಿಸಿತ್ತು.* 2023ರಲ್ಲಿ ಜಪಾನ್‌ನ ಜಿಡಿಪಿ ಗಾತ್ರ ₹348 ಲಕ್ಷ ಕೋಟಿಗೆ ತಲುಪಿದೆ (4.2 ಟ್ರಿಲಿಯನ್ ಅಮೆರಿಕನ್ ಡಾಲರ್), ಕಳೆದ ತಿಂಗಳ ವರದಿ ಪ್ರಕಾರ ಜರ್ಮನಿಯ ಜಿಡಿಪಿ ಗಾತ್ರ ₹365 ಲಕ್ಷ ಕೋಟಿಗೆ (4.4 ಟ್ರಿಲಿಯನ್ ಅಮೆರಿಕನ್ ಡಾಲರ್) ಏರಿಕೆ ಆಗಿದೆ.* ಜರ್ಮನಿಯು, ಯೂರೊ ಕರೆನ್ಸಿ ಹಾಗೂ ಹಣದುಬ್ಬರ ನಿಯಂತ್ರಣದ ಮೂಲಕ ಸದೃಢವಾದ ಆರ್ಥಿಕತೆ ರೂಪಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಹೋಲಿಸಿದರೆ ಜಪಾನ್ ಕರೆನ್ಸಿ ಯೆನ್ ದುರ್ಬಲವಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.