* ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಅಕ್ಟೋಬರ್ 15 ರಂದು ನವದೆಹಲಿಯಲ್ಲಿ ಆರೋಗ್ಯ, ಕೃಷಿ ಮತ್ತು ಸುಸ್ಥಿರ ನಗರಗಳ ಮೇಲೆ ಕೇಂದ್ರೀಕರಿಸಿದ ಮೂರು ಕೃತಕ ಬುದ್ಧಿಮತ್ತೆ ಕೇಂದ್ರಗಳನ್ನು (AI-COE) ಘೋಷಿಸಿದ್ದಾರೆ.* ಸಂಶೋಧನೆ, ನಾವೀನ್ಯತೆ ಮತ್ತು ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ಮತ್ತು ಸಾರ್ವಜನಿಕ ಕಲ್ಯಾಣವನ್ನು ಖಾತ್ರಿಪಡಿಸುವಲ್ಲಿ ಈ ಕೇಂದ್ರಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದಾರೆ.* ಕೃತಕ ಬುದ್ಧಿಮತ್ತೆಗಾಗಿ ಈ ಮೂರು CoE ಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು, ಉದ್ಯಮ ಪಾಲುದಾರರು ಮತ್ತು ಸ್ಟಾರ್ಟ್‌ಅಪ್‌ಗಳ ಒಕ್ಕೂಟದಲ್ಲಿ ಮುನ್ನಡೆಸುತ್ತವೆ. ಈ ಕೇಂದ್ರಗಳನ್ನು ದೆಹಲಿಯ ಏಮ್ಸ್, ಐಐಟಿ ರೋಪರ್ ಮತ್ತು ಐಐಟಿ ಕಾನ್ಪುರದಲ್ಲಿ ಸ್ಥಾಪಿಸಲಾಗುವುದು.* ದೆಹಲಿಯ AIIMS ನಲ್ಲಿರುವ ಕೇಂದ್ರವು IIT ದೆಹಲಿ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ, IIT Ropar ನಲ್ಲಿರುವ ಕೇಂದ್ರವು ಕೃಷಿಯಲ್ಲಿ ಕೆಲಸ ಮಾಡುತ್ತದೆ ಮತ್ತು IIT ಕಾನ್ಪುರದಲ್ಲಿರುವ ಒಂದು ಸುಸ್ಥಿರ ನಗರಕ್ಕಾಗಿ ಕೆಲಸ ಮಾಡುತ್ತದೆ.* "ಮೇಕ್ ಎಐ ಇನ್ ಇಂಡಿಯಾ ಮತ್ತು ಮೇಕ್ ಎಐ ವರ್ಕ್ ಫಾರ್ ಇಂಡಿಯಾ" ದೃಷ್ಟಿಯ ಭಾಗವಾಗಿ ಈ ಕೇಂದ್ರಗಳ ಸ್ಥಾಪನೆಯನ್ನು 2023-24ರ ಬಜೆಟ್‌ನಲ್ಲಿ ಘೋಷಿಸಲಾಯಿತ್ತು. * ಮೂರು ಎಐ ಸೆಂಟರ್ ಆಫ್ ಎಕ್ಸಲೆನ್ಸ್‌ಗಳ ರಚನೆಗೆ ಸರ್ಕಾರವು FY 2023-24 ರಿಂದ FY 2027-28 ರ ಅವಧಿಯಲ್ಲಿ , ಒಟ್ಟು ರೂ.990.00 Cr ಅನುಮೋದನೆ ನೀಡಿದೆ.* ಧರ್ಮೇಂದ್ರ ಪ್ರಧಾನ್, ಈ AI-CoE ಗಳು "ಜಾಗತಿಕ ಸಾರ್ವಜನಿಕ ಒಳಿತಿನ ದೇವಾಲಯಗಳಾಗಿ" ಕಾರ್ಯನಿರ್ವಹಿಸುತ್ತವೆ ಮತ್ತು ಪರಿಹಾರ ಪೂರೈಕೆದಾರರಾಗಿ ಜಾಗತಿಕ ಸಾರ್ವಜನಿಕ ನೀತಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಒತ್ತಿ ಹೇಳಿದರು.