* ಭಾರತದ ಬಿಲ್ಗಾರರು ಆರ್ಚರಿ ವಿಶ್ವಕಪ್ ಸ್ಟೇಜ್ 1ರಲ್ಲಿ ನಾಲ್ಕು ಪದಕಗಳೊಂದಿಗೆ ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.* ಭಾನುವಾರದ(ಏಪ್ರಿಲ್ 13) ಅಂತಿಮ ದಿನ ಭಾರತ ಪುರುಷರ ರಿಕರ್ವ್ ತಂಡವು ಚೈನಾಕೆ 1–5ರಿಂದ ಸೋತು ಬೆಳ್ಳಿ ಪದಕ ಪಡೆದಿತು. * ಧೀರಜ್ ಬೊಮ್ಮದೇವರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ 2–4 ಹಿನ್ನಡೆಯಿಂದ ಚೇತರಿಸಿಕೊಂಡು ಸ್ಪೇನ್ನ ಆಂಡ್ರೆಸ್ ಮೆಡಿಯೆಲ್ ವಿರುದ್ಧ 6–4 ಗೆದ್ದು ಕಂಚಿನ ಪದಕ ಗೆದ್ದರು.* ಅಭಿಷೇಕ್ ವರ್ಮಾ ಪುರುಷರ ಕಾಂಪೌಂಡ್ ವಿಭಾಗದಲ್ಲಿ ನಾಲ್ಕನೇ ಸ್ಥಾನದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಯಿತು.* ಇದಕ್ಕೂ ಮುನ್ನ ಜ್ಯೋತಿ ಸುರೇಖಾ ವೆನ್ನಂ ಮತ್ತು ರಿಷಭ್ ಯಾದವ್ ಸೇರಿದ ಕಾಂಪೌಂಡ್ ಮಿಶ್ರ ತಂಡ ಚಿನ್ನ, ಹಾಗೂ ಪುರುಷರ ಕಾಂಪೌಂಡ್ ತಂಡ ಕಂಚು ಪದಕ ಗೆದ್ದಿತ್ತು.