* ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2024–25ನೇ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ ದಾಖಲೆ ₹2.69 ಲಕ್ಷ ಕೋಟಿ ಲಾಭಾಂಶ ಘೋಷಿಸಿದೆ.* ಇದು ಹಿಂದಿನ ಆರ್ಥಿಕ ವರ್ಷದ ₹2.1 ಲಕ್ಷ ಕೋಟಿಯ ಲಾಭಾಂಶದೊಂದಿಗೆ ಹೋಲಿಸಿದರೆ ಶೇ 27.4ರಷ್ಟು ಅಧಿಕವಾಗಿದೆ. ಅಮೆರಿಕದ ಹೆಚ್ಚುವರಿ ಸುಂಕ ಮತ್ತು ಪಾಕಿಸ್ತಾನದೊಂದಿಗಿನ ಸೇನಾ ಸಂಘರ್ಷಗಳಿಂದ ಉಂಟಾಗುವ ವೆಚ್ಚವನ್ನು ತಡೆಗಟ್ಟಲು ಈ ಲಾಭಾಂಶ ಸಹಾಯಕವಾಗಬಹುದು ಎಂಬ ನಿರೀಕ್ಷೆಯಿದೆ.* ಆರ್ಬಿಐನ 616ನೇ ಸಭೆಯಲ್ಲಿ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.* 2022–23ರಲ್ಲಿ ಆರ್ಬಿಐ ಕೇಂದ್ರ ಸರ್ಕಾರಕ್ಕೆ ₹87,416 ಕೋಟಿ ಲಾಭಾಂಶ ನೀಡಿತ್ತು. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆ ಕಂಡಿದೆ.* 2019ರಿಂದ ಬಿಮಲ್ ಜಲನ್ ಅಧ್ಯಕ್ಷತೆಯ ಸಮಿತಿಯ ಶಿಫಾರಸ್ಸಿನಂತೆ ಆರ್ಬಿಐ ತನ್ನ ಆರ್ಥಿಕ ಬಂಡವಾಳದ ಚೌಕಟ್ಟನ್ನು (ಇಸಿಎಫ್) ಅಳವಡಿಸಿಕೊಂಡಿದೆ.* ಈ ಆಧಾರದ ಮೇಲೆ ಕೇಂದ್ರ ಸರ್ಕಾರಕ್ಕೆ ಲಾಭಾಂಶ ಪಾವತಿಸಲಾಗುತ್ತದೆ. 2025–26ನೇ ಸಾಲಿಗೆ ತುರ್ತು ನಿಧಿಯಾದ ಸಾಂವಿಧಾನಿಕ ಮೀಸಲಾತಿಯ ಪ್ರಮಾಣವನ್ನು ಶೇ 7.5ಕ್ಕೆ ನಿಗದಿಪಡಿಸಲು ಮಂಡಳಿ ಅನುಮೋದನೆ ನೀಡಿದೆ, ಇದು 2024–25ರಲ್ಲಿ ಶೇ 6.5ರಷ್ಟಿತ್ತು.* ಆರ್ಬಿಐ ತನ್ನ ಬ್ಯಾಲೆನ್ಸ್ ಶೀಟ್ನ ಆಧಾರದ ಮೇಲೆ ಅನಿರೀಕ್ಷಿತ ಆರ್ಥಿಕ ಅಪಾಯಗಳನ್ನು ಎದುರಿಸಲು ಸಿಆರ್ಬಿ ಶೇ 4.5 ರಿಂದ ಶೇ 7.5ರ ಮಿತಿಯಲ್ಲಿ ಇರಿಸಿಕೊಳ್ಳಬೇಕೆಂದು ಪರಿಷ್ಕೃತ ನಿಯಮಾವಳಿಯಲ್ಲಿ ನಿಗದಿಪಡಿಸಲಾಗಿದೆ.