* ಭಾರತೀಯ ಆಲ್ರೌಂಡರ್ ಆರ್. ಅಶ್ವಿನ್ ಮುಂಬರುವ ಬಿಗ್ ಬ್ಯಾಶ್ ಲೀಗ್ (BBL) ನಲ್ಲಿ ಸಿಡ್ನಿ ಥಂಡರ್ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಆಸ್ಟ್ರೇಲಿಯಾದ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ. * ಇದರಿಂದ ಬಿಬಿಎಲ್ ಕ್ಲಬ್ಗಾಗಿ ಆಡುವ ಭಾರತದ ಮೊದಲ ಮಾಜಿ ಆಟಗಾರನಾಗುವ ಗೌರವ ಅಶ್ವಿನ್ ಅವರಿಗೆ ಲಭಿಸಿದೆ.* ಐಪಿಎಲ್ ಕ್ರಿಕೆಟ್ನಿಂದ ಕಳೆದ ತಿಂಗಳು ನಿವೃತ್ತಿಯಾದ ಅಶ್ವಿನ್, "ಡೇವಿಡ್ ವಾರ್ನರ್ ಆಡುವ ರೀತಿಯು ನನಗೆ ಇಷ್ಟ. ನಾಯಕ ತನ್ನ ಮನಸ್ಸನ್ನು ಹಂಚಿಕೊಳ್ಳುವುದು ತಂಡಕ್ಕೆ ಉತ್ತಮ. ಥಂಡರ್ ಪರ ಆಡಲು ಉತ್ಸುಕನಾಗಿದ್ದೇನೆ" ಎಂದು ತಿಳಿಸಿದ್ದಾರೆ.* 39 ವರ್ಷದ ಅಶ್ವಿನ್ ಕಳೆದ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಅವರು 537 ವಿಕೆಟ್ಗಳೊಂದಿಗೆ ಭಾರತದ 2ನೇ ಗರಿಷ್ಠ ವಿಕೆಟ್ ತಗೆದ ಬೌಲರ್ (ಅನಿಲ್ ಕುಂಬ್ಳೆ ನಂತರ) ಆಗಿದ್ದಾರೆ.* ಮುಂದಿನ ಆವೃತ್ತಿಯ ಬಿಬಿಎಲ್ ಡಿಸೆಂಬರ್ 14ರಿಂದ ಪ್ರಾರಂಭವಾಗಲಿದ್ದು, ಸಿಡ್ನಿ ಥಂಡರ್ ತಂಡವು ಡಿಸೆಂಬರ್ 17ರಂದು ಹೊಬರ್ಟ್ ಹರಿಕೇನ್ಸ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.* ಇದಲ್ಲದೆ, ಅಶ್ವಿನ್ 2025ರ ಹಾಂಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಪರವೂ ಆಡಲಿದ್ದಾರೆ.