* ಸಿಂಧೂರ ಕಾರ್ಯಚರಣೆಯ ನಂತರ ಸುಮಾರು 15 ದೇಶಗಳು ಬ್ರಹ್ಮೋಸ್ ಕ್ಷಿಪಣಿಗೆ ಬೇಡಿಕೆ ಇಟ್ಟಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.* ಬ್ರಹ್ಮೋಸ್ ಕ್ಷಿಪಣಿಯು ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು,ಇದನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿ ಪಡಿಸಿವೆ.* ಇದನ್ನು ಜಲಂತರ್ಗಾಮಿಗಳು, ಹಡಗುಗಳು, ವಿಮಾನಗಳು ಅಥವಾ ನೆಲದಿಂದ ಕೂಡ ಉಡಾವಣೆ ಮಾಡಬಹುದಾಗಿದ್ದು, ಆಪರೇಷನ್ ಸಿಂಧೂರಲ್ಲಿ ಬಹುಮುಖ್ಯ ಕಾರ್ಯವಹಿಸಿತ್ತು.* ಬ್ರಹ್ಮೋಸ್ ಕ್ಷಿಪಣಿಗಳನ್ನು ಇನ್ನು ಮುಂದೆ ಲಕ್ನೋದಿಂದ ರಫ್ತು ಮಾಡುವುದಾಗಿ ಘೋಷಿಸಿರುವ ಸಿಂಗ್, ಇದು ರಕ್ಷಣಾ ಕ್ಷೇತ್ರದಲ್ಲಿ ದೇಶದ ಆತ್ಮನಿರ್ಭರತೆಯನ್ನು ಬಲಪಡಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೆ ದಾರಿಯಾಗುತ್ತದೆ ಎಂದು ಹೇಳಿದರು.* ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋದಲ್ಲಿ ಬ್ರಹ್ಮೋಸ್ ವಾಯುಪ್ರದೇಶ ಏಕೀಕರಣ ಮತ್ತು ಪರೀಕ್ಷಾ ಸೌಲಭ್ಯವನ್ನು ಉದ್ಘಾಟಿಸಿ, ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ಕೈಗಾರಿಕೆಗಳು ವೇಗವಾಗಿ ಸ್ಥಾಪನೆಯಾಗುತ್ತಿವೆ. ಸುಧಾರಿತ ಕಾನೂನು ಸುವ್ಯವಸ್ಥೆ ಮತ್ತು ಬಲಿಷ್ಠ ಮೂಲಸೌಕರ್ಯಗಳೊಂದಿಗೆ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಾದ್ಯಂತ ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.* ಸಿಂಗ್ ಅವರು ರಾಷ್ಟ್ರೀಯ ಪಿಜಿ ಕಾಲೇಜಿನಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರ ಭಾನು ಗುಪ್ತಾ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು ಮತ್ತು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಗುಪ್ತಾ ಅವರ ಸರಳತೆ, ತ್ಯಾಗ ಮತ್ತು ರಾಷ್ಟ್ರಭಕ್ತಿಯನ್ನು ಸಿಂಗ್ ಪ್ರಶಂಸೆ ಮಾಡಿದರು.