* 4415 ಭಾರತೀಯರು ತಾಯ್ನಾಡಿಗೆ ಭಾರತ ಸರ್ಕಾರ ಜೂನ್ 18ರಂದು ಆರಂಭಿಸಿದ 'ಆಪರೇಷನ್ ಸಿಂಧೂ' ಕಾರ್ಯಾಚರಣೆಯ ಮೂಲಕ ಇರಾನ್ ಮತ್ತು ಇಸ್ರೇಲ್ನಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗುತ್ತಿದೆ. ಈ ಕಾರ್ಯಾಚರಣೆ ಎರಡೂ ದೇಶಗಳ ಮಧ್ಯೆ ನಡೆದಿದ್ದ ಸೇನಾ ಸಂಘರ್ಷದ ಹಿನ್ನೆಲೆ ನಡೆಯುತ್ತಿದೆ.* ಇಂದಿನವರೆಗೆ ಈ ಕಾರ್ಯಾಚರಣೆಯ ಮೂಲಕ ಒಟ್ಟಾರೆ 4,415 ಭಾರತೀಯರನ್ನು ಕರೆತರಲಾಗಿದೆ. ಇದರಲ್ಲಿ ಇರಾನ್ನಿಂದ 3,597 ಮಂದಿ ಮತ್ತು ಇಸ್ರೇಲ್ನಿಂದ 818 ಮಂದಿ ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.* ಇದಕ್ಕಾಗಿ 19 ವಿಶೇಷ ವಿಮಾನಗಳು ಮತ್ತು ವಾಯುಪಡೆಯ ಮೂರು ವಿಮಾನಗಳನ್ನು ಬಳಸಲಾಗಿದೆ.* ಇದಲ್ಲದೆ, 14 ವಿದೇಶಿಯರು ಕೂಡ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಇವರಲ್ಲಿ ನೇಪಾಳದ 9 ಮಂದಿ, ಶ್ರೀಲಂಕಾದ 4 ಮಂದಿ ಮತ್ತು ಇರಾನ್ ಮೂಲದ ಭಾರತೀಯ ಪ್ರಜೆ ಒಬ್ಬರ ಪತ್ನಿಯೂ ಸೇರಿದ್ದಾರೆ.* ಇತ್ತೀಚೆಗೆ ಗುರುವಾರ ತಡರಾತ್ರಿ ದೆಹಲಿಗೆ ಬಂದ ವಿಮಾನದಲ್ಲಿ 173 ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತನ್ನ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ನೀಡಿದೆ.