* ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಅಮರನಾಥ ಯಾತ್ರಿಕರ ಭದ್ರತೆಗಾಗಿ ಭಾರತೀಯ ಸೇನೆ, ಸಿಆರ್ಪಿಎಫ್ ಮತ್ತು ಕಾಶ್ಮೀರ ಪೋಲಿಸ್ ಜಂಟಿಯಾಗಿ ‘ಆಪರೇಷನ್ ಶಿವ’ ಕಾರ್ಯಾಚರಣೆಯನ್ನು ಆರಂಭಿಸಿದೆ.* ಈ ವರ್ಷದ ಅಮರನಾಥ ಯಾತ್ರೆ ಜುಲೈ 3ರಿಂದ ಆಗಸ್ಟ್ 9ರವರೆಗೆ ನಡೆಯಲಿದ್ದು, ಕಳೆದ ವರ್ಷದ 52 ದಿನಗಳ ಬದಲು ಈ ಬಾರಿ 38 ದಿನಗಳ ಮಟ್ಟಿಗೆ ಸೀಮಿತವಾಗಿದೆ. ಭದ್ರತೆಗೆ ಪ್ರಾಮುಖ್ಯತೆ ನೀಡಿರುವ ಕಾರಣ ಇದನ್ನು ಇಳಿಸಲಾಗಿದೆ.* ಭದ್ರತೆಗೆ ಡ್ರೋನ್ ಕ್ಯಾಮೆರಾ, ಸಿಸಿಟಿವಿ, ಜಾಮರ್ಗಳು, ಸುಧಾರಿತ ತಂತ್ರಜ್ಞಾನ, ಮತ್ತು ತ್ರಿ–ಡಿ ಮ್ಯಾಪಿಂಗ್ ಬಳಸಲಾಗಿದೆ.* ಯಾತ್ರಿಕರ ಚಲನವಲನವನ್ನು ನಿಗಾ ವಹಿಸಲು ‘ಆರ್ಎಫ್ಐಡಿ’ ಟ್ಯಾಗ್ಗಳನ್ನು ನೀಡಲಾಗಿದೆ.* 50,000ಕ್ಕಿಂತ ಅಧಿಕ ಅರೆಸೇನಾ ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಭದ್ರತಾ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರ ವಹಿಸಲಾಗುತ್ತದೆ.* ಈ ಯಾತ್ರೆಯು ಧಾರ್ಮಿಕತೆಯ ಜೊತೆಗೆ ಭಯೋತ್ಪಾದನೆಗೆ ಕಡಿವಾಣ ಹಾಕುವ, "ನಾವು ಹೆದರುವುದಿಲ್ಲ" ಎಂಬ ದೃಢ ಸಂದೇಶವನ್ನೂ ನೀಡುತ್ತದೆ.