* ಸಮುದ್ರ ಸಂರಕ್ಷಣೆಗೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಭಾರತೀಯ ಕರಾವಳಿ ಕಾವಲು ಪಡೆ (ICG) ಫೆಬ್ರವರಿ 2025ರಲ್ಲಿ 'ಆಪರೇಷನ್ ಒಲಿವಿಯಾ' ಅಡಿಯಲ್ಲಿ ಒಡಿಶಾದ ರುಶಿಕುಲ್ಯಾ ನದಿತೀರದಲ್ಲಿ 6.98 ಲಕ್ಷಕ್ಕೂ ಹೆಚ್ಚು ಆಲಿವ್ ರಿಡ್ಲಿ ಆಮೆಗಳ ಗೂಡುಕಟ್ಟುವಿಕೆಯನ್ನು ಯಶಸ್ವಿಯಾಗಿ ರಕ್ಷಿಸಿದೆ.* ಈ ಕಾರ್ಯಾಚರಣೆಯು ತನ್ನ ವಾರ್ಷಿಕ ಸಂತಾನೋತ್ಪತ್ತಿ ಅವಧಿಯಲ್ಲಿ ಈ ದುರ್ಬಲ ಪ್ರಭೇದಗಳಿಗೆ ಸುರಕ್ಷಿತ ಗೂಡುಕಟ್ಟುವ ಆವಾಸಸ್ಥಾನಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಮುದ್ರ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.* ನವೆಂಬರ್ನಿಂದ ಮೇವರೆಗೆ ನಡೆಯುವ ಈ ವಾರ್ಷಿಕ ಕಾರ್ಯಾಚರಣೆ, ಗಹಿರ್ಮಾಥ ಬೀಚ್ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಆಮೆಗಳಿಗೆ ಸುರಕ್ಷಿತ ಗೂಡು ಸ್ಥಳಗಳನ್ನು ಒದಗಿಸಲು ನಿಟ್ಟಿಸಿಕೊಂಡಿದೆ.* ಪ್ರತಿವರ್ಷ ಎಂಟು ಲಕ್ಷಕ್ಕೂ ಹೆಚ್ಚು ಆಮೆಗಳು ಈ ಭಾಗಕ್ಕೆ ಆಗಮಿಸುತ್ತವೆ.* ಐಸಿಜಿಯ ಕಠಿಣ ಗಸ್ತು, ವೈಮಾನಿಕ ಕಣ್ಗಾವಲು ಹಾಗೂ ಸಮುದಾಯ ತೊಡಗಿಸಿಕೊಳ್ಳುವಿಕೆಯೊಂದಿಗೆ, ಆಮೆಗಳನ್ನು ರಕ್ಷಿಸಲು ಎಡವಿಲ್ಲದ ಪ್ರಯತ್ನಗಳು ನಡೆದಿದೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಗೂಡುಕಟ್ಟುವಿಕೆಯನ್ನು ನೋಡಿ, ಈ ಕಾರ್ಯದ ಪರಿಣಾಮಕಾರಿತ್ವ ಮತ್ತಷ್ಟು ಸ್ಪಷ್ಟವಾಗಿದೆ.* ಆಪರೇಷನ್ ಆರಂಭದಂದಿಂದ 5,387 ಗಸ್ತು ಹಾಗೂ 1,768 ವೈಮಾನಿಕ ಕಣ್ಗಾವಲು ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ 366 ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.* ಸ್ಥಳೀಯ ಮೀನುಗಾರ ಸಮುದಾಯಗಳೊಂದಿಗೆ ಸಹಕಾರ, ಸಂರಕ್ಷಣಾ ಶಿಕ್ಷಣ, ಮತ್ತು ಎನ್ಜಿಓಗಳೊಂದಿಗೆ ಒಪ್ಪಂದಗಳು ಈ ಕಾರ್ಯಚಟುವಟಿಕೆಗೆ ಬಲ ನೀಡಿದ್ದಾರೆ. ಸಮುದ್ರ ಜೀವಿಗಳನ್ನು ರಕ್ಷಿಸಿ, ದೀರ್ಘಕಾಲೀನ ಸಮುದ್ರ ಪರಿಸರದ ಸುಸ್ಥಿರತೆಗೆ ಇದು ಮಹತ್ವದ ಹಂತವಾಗಿದೆ.