* ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯ ರೇಸ್‌ನಲ್ಲಿ ಆ್ಯಪಲ್‌ ಕಂಪನಿಯನ್ನು ಮೈಕ್ರೋಸಾಫ್ಟ್ (Microsoft) ಹಿಂದಿಕ್ಕಿದೆ ವಾಷಿಂಗ್ಟನ್ ಮೂಲದ ಮೈಕ್ರೋಸಾಫ್ಟ್ ಷೇರುಗಳು ಜನವರಿ 11 ರಂದು (ಗುರುವಾರ) ಶೇ.1.5ರಷ್ಟು ಏರಿಕೆಯನ್ನು ದಾಖಲಿಸಿದ ಪರಿಣಾಮ ಕಂಪನಿಯ ಮೌಲ್ಯವು 2.888 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಯಿತು.* 2.887 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ ಆ್ಯಪಲ್ ಕಂಪನಿ ಷೇರುಗಳು ಶೇ.0.3 ಕುಸಿತ ದಾಖಲಿಸಿದವು. ಪರಿಣಾಮ 2021ರ ಬಳಿಕ ಇದೇ ಮೊದಲ ಬಾರಿಗೆ ಆ್ಯಪಲ್ ಕಂಪನಿಯ ಒಟ್ಟು ಮೌಲ್ಯವು ಮೈಕ್ರೋಸಾಫ್ಟ್‌ಗಿಂತ ಕಡಿಮೆಯಾಗಿದೆ.* "ಮೈಕ್ರೋಸಾಫ್ಟ್ ವೇಗವಾಗಿ ಬೆಳೆಯುತ್ತಿರುವ ಕಾರಣ ಮೈಕ್ರೋಸಾಫ್ಟ್ ಆಪಲ್ ಅನ್ನು ಹಿಂದಿಕ್ಕುವುದು ಅನಿವಾರ್ಯವಾಗಿತ್ತು ಮತ್ತು AI ಕ್ರಾಂತಿಯಿಂದ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ" ಎಂದು ಗಿಲ್ ಲೂರಿಯಾದ ವಿಶ್ಲೇಷಕ ಡಿ.ಎ. ಡೇವಿಡ್ಸನ್ ಅವರು ತಿಳಿಸಿದ್ದಾರೆ.* ಸತ್ಯ ನಾರಾಯಣ ನಾಡೆಲ್ಲಾ ಅವರು ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು CEO ಆಗಿದ್ದಾರೆ.