* ಭಾರತದಲ್ಲಿ ಡಿಜಿಟಲ್ ಸೇವೆಗಳ ವೇಗದ ವಿಸ್ತರಣೆಯಿಂದ ಆನ್ಲೈನ್ ವಂಚನೆ, ಗುರುತಿನ ಕಳ್ಳತನ, ಹಣಕಾಸು ಹಗರಣಗಳು ಮತ್ತು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಈ ಸವಾಲನ್ನು ಎದುರಿಸಲು, ಗೃಹ ಸಚಿವಾಲಯವು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (www.cybercrime.gov.in) ಮತ್ತು ಸಹಾಯವಾಣಿ ಸಂಖ್ಯೆ 1930 ಅನ್ನು ಪ್ರಾರಂಭಿಸಿದೆ.* ಈ ವೇದಿಕೆಗಳು ನಾಗರಿಕರಿಗೆ ಸೈಬರ್ ಅಪರಾಧಗಳನ್ನು ತಕ್ಷಣ ವರದಿ ಮಾಡಲು ಅವಕಾಶ ನೀಡುತ್ತವೆ. ಸೈಬರ್ ಜಾಗೃತಿಗಾಗಿ ‘ಸೈಬರ್ ದೋಸ್ತ್’ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗೆ ಚಂದಾದಾರರಾಗಲು ಸಚಿವಾಲಯ ಕರೆ ನೀಡಿದೆ.* ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಹಕಾರದಿಂದ, ಗ್ರಾಮೀಣ ಪ್ರದೇಶಗಳಲ್ಲೂ ಡಿಜಿಟಲ್ ಸಾಕ್ಷರತೆ ಅಭಿಯಾನಗಳನ್ನು ತೀವ್ರಗೊಳಿಸಲಾಗುವುದು.* ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆಗಳಲ್ಲಿ ಸಹಾಯವಾಣಿ ಮಾಹಿತಿ ಪ್ರದರ್ಶನ ಮತ್ತು ಬಿಲ್ಗಳಲ್ಲಿ ಜಾಗೃತಿ ಸಂದೇಶ ಸೇರಿಸಲಾಗುವುದು.* ಶೈಕ್ಷಣಿಕ ಸಂಸ್ಥೆಗಳು, ಸ್ಥಳೀಯ ಪ್ರಭಾವಿಗಳು ಮತ್ತು ಸಮುದಾಯ ಮುಖಂಡರ ಸಹಾಯದಿಂದ ಜಾಗೃತಿ ಹರಡಲಾಗುವುದು. ಶಾಲಾ ಪಠ್ಯಕ್ರಮ ಮತ್ತು ಶಿಕ್ಷಕರ ತರಬೇತಿಯಲ್ಲಿ ಸೈಬರ್ ಭದ್ರತಾ ವಿಷಯಗಳನ್ನು ಸೇರಿಸಲಾಗುವುದು.* ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಮೂಲಕ ರಾಜ್ಯ ಏಜೆನ್ಸಿಗಳೊಂದಿಗೆ ಕಾರ್ಯನಿರ್ವಹಿಸಿ, ಸೈಬರ್ ಅಪರಾಧಿಗಳನ್ನು ತಡೆದು, ಸುರಕ್ಷಿತ ಡಿಜಿಟಲ್ ಭಾರತ ನಿರ್ಮಿಸಲು ಸರ್ಕಾರ ಬದ್ಧವಾಗಿದೆ.