* ಹಾಸನ, ಕೊಡಗು, ಚಿಕ್ಕಮಗಳೂರು ಪ್ರದೇಶದ ಕಾಡಾನೆ ಹಾವಳಿ ತಡೆಯಲು ಭದ್ರಾ ಅಭಯಾರಣ್ಯದಲ್ಲಿ "ಆನೆ ಧಾಮ" ನಿರ್ಮಿಸಲಾಗುತ್ತಿದೆ.* ₹53 ಕೋಟಿ ವೆಚ್ಚದ ಯೋಜನೆಗೆ ಪೂರ್ವಭಾವಿ ಕಾರ್ಯಗಳಾದ ಸ್ಥಳ ಪರಿಶೀಲನೆ ಮುಗಿದಿದೆ. ಎರಡು ತಿಂಗಳಲ್ಲಿ ಆನೆ ಧಾಮ ಕಾಮಗಾರಿ ಆರಂಭವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.* ಆನೆ ಧಾಮದಲ್ಲಿ ಬಿದಿರು, ಹಲಸು, ಹುಲ್ಲು ಬೆಳೆಸಿ, ಕಾಡಾನೆಗಳನ್ನು ಜನವಸತಿ ಪ್ರದೇಶಗಳಿಂದ ದೂರವಿಡಲಾಗುವುದು.* ಪ್ರತಿ ವರ್ಷ 50-60 ಜನರು ವನ್ಯಜೀವಿ-ಮಾನವ ಸಂಘರ್ಷದಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ಧಾಮದಿಂದ ಈ ಸಮಸ್ಯೆ ತಗ್ಗಲಿದೆ.* ಕಳೆದ 21 ತಿಂಗಳಲ್ಲಿ 6,225 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ; 15,422 ಎಕರೆ ಅರಣ್ಯ ಪ್ರದೇಶವಾಗಿ ಘೋಷಣೆ.* ಎಚ್ಎಂಟಿ ವಶದಲ್ಲಿರುವ ₹14,300 ಕೋಟಿ ಮೌಲ್ಯದ 443 ಎಕರೆ ಅರಣ್ಯ ಭೂಮಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ತಡೆಯಲಾಗಿದೆ; ಕಾನೂನು ಹೋರಾಟ ಮುಂದುವರಿದಿದೆ.