* ಆಂಧ್ರಪ್ರದೇಶದಲ್ಲಿ 10 ವರ್ಷದ ಬಾಲಕನೊಬ್ಬ ‘ಗಿಲಾನ್ ಬರೈ ಸಿಂಡ್ರೋಮ್’ (ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲಿನ ಆಕ್ರಮಣ–ಜಿಬಿಸಿ) ರೋಗದಿಂದ ಮೃತಪಟ್ಟಿದ್ದು, ಇದು ಜಿಬಿಸಿ ರೋಗದಿಂದ ಸಾವನ್ನಪ್ಪಿದ ರಾಜ್ಯದ ಪ್ರಥಮ ಪ್ರಕರಣವಾಗಿದೆ.* ಶ್ರೀಕಾಕುಳಂ ಜಿಲ್ಲೆಯ ಸಂತಬೊಮ್ಮಾಳಿ ಗ್ರಾಮಕ್ಕೆ ಸೇರಿದ 10 ವರ್ಷದ ಬಾಲಕ ಜಿಬಿಸಿ ರೋಗ ಲಕ್ಷಣದಿಂದ ಜ.31ರಂದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಶ್ರೀಕಾಕುಳಂ ಮತ್ತು ವಿಶಾಖಪಟ್ಟಣದ ಸರ್ಕಾರಿ ಆಸ್ಪತ್ರೆ ಸ್ಥಳಾಂತರಿಸಲಾಯಿತು.* ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ಅವನು ಸಾವನ್ನಪ್ಪಿದ್ದಾನೆ. 'ರಾಜ್ಯದಲ್ಲಿ ಈಗಾಗಲೇ 17 ಜನರಲ್ಲಿ ಜಿಬಿಸಿ ಕಾಯಿಲೆ ದೃಢಪಟ್ಟಿದ್ದು, ಅವರೆಲ್ಲರಿಗೂ ವಿಶಾಖಪಟ್ಟಣ, ಕಾಕಿನಾಡ, ಗುಂಟೂರು ಮತ್ತು ಕರ್ನೂಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಸರ್ಕಾರ ತಿಳಿಸಿದೆ.