Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಆಂಧ್ರಪ್ರದೇಶದ "ರೈತನ್ನ ಮೀಕೋಸಂ" : ರೈತರ ಸಬಲಿಕರಣಕ್ಕೆ ಹೊಸ ದಿಕ್ಕು
27 ನವೆಂಬರ್ 2025
* ಆಂಧ್ರಪ್ರದೇಶ ಸರ್ಕಾರವು 2025ರ ನವೆಂಬರ್ 24ರಂದು
“ರೈತನ್ನ ಮೀಕೋಸಂ”
ಎಂಬ ಮಹತ್ವಾಕಾಂಕ್ಷಿ ಕೃಷಿ ಉಪಕ್ರಮವನ್ನು ಆರಂಭಿಸಿದೆ. ಈ ಯೋಜನೆಯ ಪ್ರಧಾನ ಗುರಿ —
ರೈತರ ಜೀವನಮಟ್ಟವನ್ನು
ಸು
ದಾ
ರಿಸುವುದು, ನೀರಿನ ಲಭ್ಯತೆ ಹೆಚ್ಚಿಸುವುದು, ಆಧುನಿಕ ತಂತ್ರಜ್ಞಾನ ಬಳಸುವಂತೆ ಪ್ರೋತ್ಸಾಹಿಸುವುದು ಮತ್ತು ಕೃಷಿಯಿಂದಾಗುವ ಆದಾಯವನ್ನು ಸ್ಥಿರಗೊಳಿಸುವುದು.
*
ಈ ಯೋಜನೆ ಮುಖ್ಯವಾಗಿ
“ಐದು ಅಂಶಗಳ ಸಮಗ್ರ ಸೂತ್ರ”
ದ ಮೇಲೆ ನಿರ್ಮಿತವಾಗಿದ್ದು, ಕೃಷಿ ಕ್ಷೇತ್ರದ ಬಹುಮುಖ ಸಮಸ್ಯೆಗಳ ಪರಿಹಾರವನ್ನು ಏಕಕಾಲದಲ್ಲಿ ನೀಡುವ ಪ್ರಯತ್ನವಾಗಿದೆ.
1. ಜಲ ಭದ್ರತೆ (Water Security)
ರಾಜ್ಯದಲ್ಲಿ ನೀರಿನ ಅಭಾವ ಮತ್ತು ಅನಿಶ್ಚಿತ ಮಳೆಯ ಪರಿಣಾಮ ರೈತರು ಎದುರಿಸುವ ಸಂಕಷ್ಟವನ್ನು ನಿವಾರಿಸಲು ಜಲ ಸಂಗ್ರಹಣೆ, ಕಾಲುವೆ ಅಭಿವೃದ್ಧಿ, ಮಳೆನೀರು ಸಂಗ್ರಹಣೆ ಮುಂತಾದ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ.
ಇದರಿಂದ ಕೃಷಿ ಹೊಲಗಳಿಗೆ ವರ್ಷಪೂರ್ತಿ ನೀರಿನ ಲಭ್ಯತೆಯನ್ನು ಖಚಿತಪಡಿಸುವುದು ಗುರಿ.
2. ಬೇಡಿಕೆ ಆಧಾರಿತ ಕೃಷಿ (Demand-Driven Agriculture)
ಕೃಷಿ ಉತ್ಪಾದನೆ ಮಾರುಕಟ್ಟೆ ಬೇಡಿಕೆಗೆ ಹೊಂದಿಕೊಳ್ಳುವಂತೆ ಮಾಡುವಾಗ: ಯಾವ ಬೆಳೆಗಳಿಗೆ ಹೆಚ್ಚು ಬೇಡಿಕೆ ಇದೆ, ಮತ್ತು ಯಾವ ಬೆಳೆ ಹೆಚ್ಚು ಲಾಭದಾಯಕ ಆ ಬೆಳೆಗಳಿಗೆ ಅಗತ್ಯ ಮಾರ್ಗದರ್ಶನ ಇವೆಲ್ಲವನ್ನು ಸರ್ಕಾರ ರೈತರಿಗೆ ಒದಗಿಸುತ್ತದೆ. ಇದು ನಷ್ಟ ತಪ್ಪಿಸಿ, ರೈತರ ಆದಾಯವನ್ನು ಹೆಚ್ಚಿಸಲಿದೆ.
3. ಕೃಷಿ-ತಂತ್ರಜ್ಞಾನ ದತ್ತು (Agri-Tech Adoption)
ಡ್ರೋನ್, ಜಿಐಎಸ್ ಮ್ಯಾಪಿಂಗ್, ಮಣ್ಣಿನ ಆರೋಗ್ಯ ತಪಾಸಣೆ, ಸ್ಮಾರ್ಟ್ ಸಿಂಚನ ವಿಧಾನಗಳು, ಮೊಬೈಲ್ ಆಧಾರಿತ ಸಲಹೆಗಳು ಮೊದಲಾದ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುವುದು. ಇದರಿಂದ ಉತ್ಪಾದಕತೆ ಹೆಚ್ಚಳ, ವೆಚ್ಚ ಕಡಿತ, ಬೆಳೆ ರೋಗ ನಿಯಂತ್ರಣ ಹಾಗೂ ಸಮಯ ಉಳಿವು ಎಂಬ ಪರಿಣಾಮಗಳು ಕಂಡುಬರಲಿವೆ.
4. ಆಹಾರ ಸಂಸ್ಕರಣೆ ವಿಸ್ತರಣೆ (Food Processing Expansion)
ಕೃಷಿ ಉತ್ಪನ್ನಗಳನ್ನು ನೇರ ಮಾರುಕಟ್ಟೆಗೆ ಕಳುಹಿಸುವ ಬದಲು ಸಂಸ್ಕರಣಾ ಘಟಕಗಳಲ್ಲಿ ಮೌಲ್ಯವರ್ಧನೆ ಮಾಡುವ ಮೂಲಕ ರೈತರು ಹೆಚ್ಚು ಲಾಭ ಪಡೆಯುವಂತೆ ಸಹಕಾರ ನೀಡಲಾಗುತ್ತದೆ. ಇದರ ಅಡಿ ಶೀತಾಗಾರಗಳು, ಪ್ಯಾಕಿಂಗ್ ಯುನಿಟ್ಗಳು, ಅಗ್ರೋ-ಪ್ರೊಸೆಸಿಂಗ್ ಕೇಂದ್ರಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ.
5. ಸಮಗ್ರ ಸರ್ಕಾರಿ ಬೆಂಬಲ (Integrated Government Support)
ಒಂದೇ ವೇದಿಕೆಯಡಿ ವಿವಿಧ ಇಲಾಖೆಗಳ ಸೇವೆಗಳನ್ನು ರೈತರಿಗೆ ಲಭ್ಯವಾಗುವಂತೆ ಮಾಡುವ ನಿರ್ಧಾರ. ಇದರಲ್ಲಿ ಸಾಲ ಸೌಲಭ್ಯ, ಉಪಾಧಿಗಳನ್ನು (subsidies), ಮಾರುಕಟ್ಟೆ ಸಂಪರ್ಕ, ತರಬೇತಿ ಮತ್ತು ಕೃಷಿ ಸಲಹೆಗಳು ಈ ರೀತಿಯ ಏಕತೃತ್ವ ವ್ಯವಸ್ಥೆಯಿಂದ ಸರ್ಕಾರಿ ಯೋಜನೆಗಳ ಪ್ರಯೋಜನ ನೇರವಾಗಿ ರೈತರಿಗೆ ತಲುಪುತ್ತದೆ.
*
“ರೈತನ್ನ ಮೀಕೋಸಂ”
ಉಪಕ್ರಮವು ಕೃಷಿಯನ್ನು
ಸ್ಥಿರ, ವಿಜ್ಞಾನಾಧಾರಿತ ಹಾಗೂ ಮಾರುಕಟ್ಟೆ ಕೇಂದ್ರಿತ
ಮಾಡುವತ್ತ ದೊಡ್ಡ ಹೆಜ್ಜೆ.
ಇದು ರೈತರನ್ನು ಕೇವಲ ಸಹಾಯದಿಂದಲೇ ಅಲ್ಲ,
ಸಬಲಿಕರಣದ ದಾರಿಯಲ್ಲಿ ನಡೆಸುವ ಸಮಗ್ರ ಕೃಷಿ ಪರಿವರ್ತನಾ ಯೋಜನೆ
.
Take Quiz
Loading...