* ತೆಲುಗು ದೇಶಂ ನಾಯಕ ನಾರಾ ಚಂದ್ರಬಾಬು ನಾಯ್ಡು ಅವರು ಜೂನ್ 12 ರಂದು (ಬುಧವಾರ) ವಿಜಯವಾಡದಲ್ಲಿ  ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.* ಜನಸೇನಾ ಪಕ್ಷದ ಸ್ಥಾಪಕ, ಖ್ಯಾತ ನಟ ಪವನ್ ಕಲ್ಯಾಣ್, ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಮತ್ತು ಜನಸೇನಾ ಹಿರಿಯ ನಾಯಕ ನಾದೆಂಡ್ಡ ಮನೋಹರ್ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಅವರು ಪ್ರಮಾಣ ವಚನ ಬೋಧಿಸಿದರು.* ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಒಂದು ದಿನ ಮೊದಲು, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 11 ರಂದು (ಮಂಗಳವಾರ) ಅಮರಾವತಿ ರಾಜ್ಯದ ಏಕೈಕ ರಾಜಧಾನಿಯಾಗಲಿದೆ ಎಂದು ಘೋಷಿಸಿದರು.* 24 ಮಂದಿ ಸಚಿವರ ಪೈಕಿ 17 ಮಂದಿ ಹೊಸಬರಾಗಿದ್ದಾರೆ. ಸಂಪುಟದಲ್ಲಿ ಮೂವರು ಮಹಿಳೆಯರು, ಎಂಟು ಹಿಂದುಳಿದ ವರ್ಗಗಳ ಮುಖಂಡರು, ಇಬ್ಬರು ಎಸ್‌ಸಿಗಳು, ಒಬ್ಬರು ಎನ್‌ಟಿ ಮತ್ತು ಒಬ್ಬ ಮುಸ್ಲಿಂಗೆ ಪ್ರಾತಿನಿಧ್ಯ ನೀಡಲಾಗಿದೆ.* ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ನೇತೃತ್ವದ ಎನ್‌ಡಿಎ 175 ಸ್ಥಾನಗಳ ಪೈಕಿ 164 ಸ್ಥಾನಗಳನ್ನು ಗೆದ್ದುಕೊಂಡು ಐತಿಹಾಸಿಕ ಜಯ ಸಾಧಿಸಿತ್ತು ಟಿಡಿಪಿ ಸ್ಪರ್ಧಿಸಿದ 144 ಸ್ಥಾನಗಳಲ್ಲಿ 135 ಸ್ಥಾನಗಳನ್ನು ಗೆದ್ದರೆ, ಜನಸೇನಾ ಸ್ಪರ್ಧಿಸಿದ ಎಲ್ಲಾ 21 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಸ್ಪರ್ಧಿಸಿದ 10 ಸ್ಥಾನಗಳ ಪೈಕಿ ಎಂಟು ಸ್ಥಾನವನ್ನು ಪಡೆದುಕೊಂಡಿತ್ತು.