Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಆಂಧ್ರದ ಹೋಪ್ ಐಲೆಂಡ್ನಲ್ಲಿ ಭಾರತದ 3ನೇ ಬಾಹ್ಯಾಕಾಶ ನಿಲ್ದಾಣ
Authored by:
Akshata Halli
Date:
23 ಜನವರಿ 2026
➤
ಅಮರಾವತಿ/ಕಾಕಿನಾಡ:
ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊಂದು ಐತಿಹಾಸಿಕ ಅಧ್ಯಾಯಕ್ಕೆ ಅಡಿಪಾಯ ಬಿದ್ದಿದೆ. ಆಂಧ್ರಪ್ರದೇಶದ ಕಾಕಿನಾಡ ತೀರದಲ್ಲಿರುವ
'ಹೋಪ್ ಐಲೆಂಡ್' (Hope Island)
ನಲ್ಲಿ ಭಾರತದ
ಮೂರನೇ ಬಾಹ್ಯಾಕಾಶ ಉಡಾವಣಾ ಕೇಂದ್ರ (Space Port)
ಸ್ಥಾಪನೆಯಾಗಲಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ
ಎನ್. ಚಂದ್ರಬಾಬು ನಾಯ್ಡು
ಅಧಿಕೃತವಾಗಿ ಘೋಷಿಸಿದ್ದಾರೆ.
ಶ್ರೀಹರಿಕೋಟ ಮತ್ತು ಕುಲಶೇಖರಪಟ್ಟಣಂ ನಂತರ ದೇಶದ ಮೂರನೇ ಪ್ರಮುಖ ಉಡಾವಣಾ ಕೇಂದ್ರವಾಗಿ ಹೋಪ್ ಐಲೆಂಡ್ ಹೊರಹೊಮ್ಮಲಿದೆ.
➤ ಹೋಪ್ ಐಲೆಂಡ್:
ಇದು ಬಂಗಾಳ ಕೊಲ್ಲಿಯ ಕಾಕಿನಾಡ ಕರಾವಳಿಯಲ್ಲಿರುವ ಅತಿ ಸಣ್ಣದಾದ, ಹಾವಿನ ಆಕಾರದ (Tadpole-shaped) ದ್ವೀಪವಾಗಿದೆ. ಇದು 18ನೇ ಶತಮಾನದಲ್ಲಿ ಗೋದಾವರಿ ನದಿಯ ಉಪನದಿಯಾದ
ಕೋರಿಂಗಾ ನದಿ
ಯು ತಂದ ಹೂಳು ಸಂಗ್ರಹದಿಂದ ನೈಸರ್ಗಿಕವಾಗಿ ನಿರ್ಮಾಣವಾಗಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸುಮಾರು 600 ಕಿ.ಮೀ ದೂರದಲ್ಲಿದೆ.
ಇಲ್ಲಿಂದ ಉಪಗ್ರಹ ಉಡಾವಣೆ ಮಾಡುವುದರಿಂದ ಜನವಸತಿ ಪ್ರದೇಶಗಳಿಗೆ ಅಪಾಯ ಕಡಿಮೆ ಮತ್ತು ಬಂಗಾಳ ಕೊಲ್ಲಿಯ ಮೇಲೆ ಸುಲಭವಾಗಿ ಪಥವನ್ನು ನಿರ್ಧರಿಸಬಹುದು.
ಈ ದ್ವೀಪವು
ಆಲಿವ್ ರಿಡ್ಲಿ ಆಮೆಗಳ (Olive Ridley turtles)
ಸಂತಾನೋತ್ಪತ್ತಿ ಕೇಂದ್ರವಾಗಿದೆ ಮತ್ತು ಸಮೀಪದಲ್ಲೇ
ಕೋರಿಂಗಾ ವನ್ಯಜೀವಿ ಧಾಮ
ವಿದೆ.
➤
ಭಾರತದ ಇತರ ಬಾಹ್ಯಾಕಾಶ ನಿಲ್ದಾಣಗಳು:
ಈ ಹೊಸ ಕೇಂದ್ರದೊಂದಿಗೆ ಭಾರತವು ಮೂರು ಪ್ರಮುಖ ಉಡಾವಣಾ ಕೇಂದ್ರಗಳನ್ನು ಹೊಂದಿದಂತಾಗುತ್ತದೆ:
1.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SHAR), ಶ್ರೀಹರಿಕೋಟಾ:
ಇದು ಭಾರತದ ಪ್ರಾಥಮಿಕ ಮತ್ತು ಅತಿದೊಡ್ಡ ಉಡಾವಣಾ ಕೇಂದ್ರವಾಗಿದೆ.
2.
ಕುಲಶೇಖರಪಟ್ಟಣಂ (ತಮಿಳುನಾಡು):
ಇದು ಸಣ್ಣ ಉಪಗ್ರಹ ಉಡಾವಣಾ ವಾಹನಗಳಿಗಾಗಿ (SSLV) ಅಭಿವೃದ್ಧಿಪಡಿಸಲಾಗುತ್ತಿರುವ ಎರಡನೇ ಕೇಂದ್ರ
3.
ಹೋಪ್ ಐಲೆಂಡ್ (ಆಂಧ್ರಪ್ರದೇಶ):
ಖಾಸಗಿ ಮತ್ತು ವಾಣಿಜ್ಯ ಉದ್ದೇಶದ ಉಡಾವಣೆಗಳಿಗಾಗಿ ಉದ್ದೇಶಿತ ಕೇಂದ್ರ.
Take Quiz
Loading...