* ಚೀನಾ ಹಿಂದೂ ಮಹಾಸಾಗರದಲ್ಲಿ ನೌಕಾ ಶಕ್ತಿಯನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ತದನುಸಾರ ತಯಾರಿ ನಡೆಸುತ್ತಿದೆ.* ಭಾರತವು ಆಂಧ್ರಪ್ರದೇಶದ ಕರಾವಳಿಯಲ್ಲಿ ಹೊಸ ನೌಕಾ ನೆಲೆ ಸ್ಥಾಪಿಸಲು ಯೋಜಿಸಿದೆ, ಈ ನೆಲೆಯಲ್ಲಿ ಪರಮಾಣು ಜಲಾಂತರ್ಗಾಮಿ ನೌಕೆಗಳು ಸೇರಲಿವೆ.* ಈ ನೆಲೆ ವಿಶಾಖಪಟ್ನಂನಲ್ಲಿ ಇರುವ ಈಸ್ಟ್ ನಾವಲ್ ಕಮಾಂಡ್ನಿಂದ 50 ಕಿ.ಮೀ ದೂರದ ರಾಂಬಿಲ್ಲಿಯಲ್ಲಿ ನಿರ್ಮಾಣವಾಗುತ್ತಿದೆ.* ರಾಂಬಿಲ್ಲಿ ನೌಕಾ ನೆಲೆಯಲ್ಲಿ ಪರಮಾಣು ನೌಕೆಗಳಿಗೆ ಸುರಂಗ ಮಾರ್ಗ ವ್ಯವಸ್ಥೆ ಒದಗಿಸಲಾಗಿದೆ.* 'ಪ್ರಾಜೆಕ್ಟ್ ವರ್ಷ' ಅಡಿಯಲ್ಲಿ ಈ ನೆಲೆಯ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, 2026ರಲ್ಲಿ ಕಾರ್ಯಾರಂಭವಾಗಲಿದೆ. ಪ್ರಾಜೆಕ್ಟ್ ವರ್ಷ ನಂತರ ಹಂತಹಂತಗಳಲ್ಲಿ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.* ಪಶ್ಚಿಮ ತೀರದ ಕಾರವಾರ ಬಂದರಿನಲ್ಲಿ 'ಪ್ರಾಜೆಕ್ಟ್ ಸೀ ಬರ್ಡ್' ಅಡಿಯಲ್ಲಿ 32 ಯುದ್ಧ ನೌಕೆಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ.* ಕಾರವಾರ ಒಳ ಬಂದರು ಸಿದ್ಧವಾಗಿದ್ದು, ಹೊರ ಬಂದರಿನ ಕಾಮಗಾರಿ ಪ್ರಗತಿಯಲ್ಲಿದೆ.